Wednesday, Dec 1 2021 | Time 20:56 Hrs(IST)
Special Share

ದೇಶದಲ್ಲಿ ವಿಮಾನ ಇಂಧನಕ್ಕಿಂತಲೂ ಪೆಟ್ರೋಲ್‌ ದುಬಾರಿ !

ನವದೆಹಲಿ, ಅ 20 (ಯುಎನ್‌ ಐ) - ದೇಶದಲ್ಲಿ ತೈಲ ಉತ್ಪನ್ನಗಳ ಬೆಲೆ ಏರಿಕೆಗೆ ಅಂತ್ಯವೇ ಇಲ್ಲ ಎಂಬಂತೆ ಕಂಡು ಬರುತ್ತಿದೆ. ಬುಧವಾರವೂ ಸಹ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್​​ ಹಾಗೂ ಡೀಸೆಲ್​ ಮೇಲೆ ತಲಾ 35 ಪೈಸೆಯಷ್ಟು ಹೆಚ್ಚಿಸಿವೆ.
ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಲೀಟರ್ ಪೆಟ್ರೋಲ್ ದರ 106.19 ರೂಪಾಯಿ ಹಾಗೂ ಡೀಸೆಲ್​ ದರ 94.92 ರೂಪಾಯಿ ಇದೆ. ಮತ್ತೊಂದು ವಿಶೇಷವೆಂದರೆ ವಿಮಾನಗಳಿಗೆ ಬಳಸುವ ಟರ್ಬೈನ್ ಇಂಧನ ಬೆಲೆಗಿಂತ ಪೆಟ್ರೋಲ್ ಈಗ ಶೇ. 34 ರಷ್ಟು ಹೆಚ್ಚಾಗಿದೆ. ಪ್ರಸ್ತುತ ವಿಮಾನಗಳಿಗೆ ಬಳಸುವ ಟರ್ಬೈನ್ ಇಂಧನ ಬೆಲೆ ಪ್ರತಿ ಲೀಟರ್‌ಗೆ 79 ಇದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.112.11 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 102.89 ರೂ. ಗೆ ತಲುಪಿದೆ
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 109.89ಕ್ಕೆ ತಲುಪಿದ್ದು, ಪ್ರತಿ ಲೀಟರ್ ಡೀಸೆಲ್ ದರ 100.75 ರೂ. ಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 106.77ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 98.03 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 103.32 ರೂ. ಇದ್ದು, ಲೀಟರ್ ಡೀಸೆಲ್ 99.27 ಕ್ಕೆ ಏರಿಕೆಯಾಗಿದೆ.
ಯುಎನ್‌ ಐ ಕೆವಿಆರ್‌ 8.12