Sunday, Sep 26 2021 | Time 17:48 Hrs(IST)
Sports Share

ಫೆಡರರ್ ಪಂದ್ಯ ವೀಕ್ಷಿಸಿದ ರವಿ ಶಾಸ್ತ್ರಿ

ಲಂಡನ್, ಜು.2 (ಯುಎನ್ಐ)- ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಹಾಗೂ ರಿಚರ್ಡ್ ಗ್ಯಾಸ್ಕೆಟ್ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಿದರು.

ಪಂದ್ಯ ಆರಂಭಕ್ಕೆ ಮುನ್ನ ಟ್ವಿಟ್ ಮಾಡಿರುವ ರವಿ ಶಾಸ್ತ್ರಿ, ಬಿಸಿಲಿನ ವಾತಾವರಣದಲ್ಲಿ ನಡೆಯಲಿರುವ ಪಂದ್ಯವನ್ನು ನೋಡಲು ನಾನು ತುಂಬಾ ಉತ್ಸುಕನಾಗಿರುವೆ ಎಂದು ಬರೆದುಕೊಂಡಿದ್ದರು.

ಅನುಭವಿ ಆಟಗಾರ ರೋಜರ್ ಫೆಡರರ್ ಅವರ ಆಟವನ್ನು ನೋಡಬೇಕೆಂಬ ಹಲವು ದಿನಗಳ ಕನಸು ಇಂದು ಈಡೇರಿತು ಎಂದು ಪಂದ್ಯ ನೋಡಿದ ನಂತರ ಶಾಸ್ತ್ರಿ ತಿಳಿಸಿದ್ದಾರೆ.

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಲಿದ್ದು, ಮೊದಲ ಟೆಸ್ಟ್ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿರುವ ಟ್ರೆಂಟ್‌ಬ್ರಿಜ್‌ನಲ್ಲಿ ಆಗಷ್ಟ 4 ರಿಂದ 8 ರ ವರೆಗೆ ನಡೆಯಲಿದೆ.

ಯುಎನ್ಐ ವಿಎನ್ಎಲ್ 2026