Monday, Sep 20 2021 | Time 06:59 Hrs(IST)
National Share

ದೇಶದಲ್ಲಿ 30,093 ಹೊಸ ಕೊರೋನ ಪ್ರಕರಣ, 374 ರೋಗಿಗಳ ಸಾವು

ದೇಶದಲ್ಲಿ 30,093 ಹೊಸ ಕೊರೋನ ಪ್ರಕರಣ, 374 ರೋಗಿಗಳ ಸಾವು
ದೇಶದಲ್ಲಿ 30,093 ಹೊಸ ಕೊರೋನ ಪ್ರಕರಣ, 374 ರೋಗಿಗಳ ಸಾವು

ನವದೆಹಲಿ, ಜುಲೈ 20 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 30,093 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.

ಸಚಿವಾಲಯದ ಹೊಸ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 30,093 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳುಖಚಿತವಾಗಿದ್ದು ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,11,74,322 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ 374 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಸೋಂಕಿಗೆ ಮೃತಪಟ್ಟವರ ಸಂಖ್ಯೆ 4,14,482 ಕ್ಕೆ ಏರಿಕೆಯಾಗಿದೆ. ಒಂದೇ ದಿನ 45,254 ಕೊರೊನಾ ಸೋಂಕಿತರು ಗುಣಮುಖರಾಗಿ ಚೇತರಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 4,06,130 ಸಕ್ರಿಯ ಪ್ರಕರಣಗಳಿವೆ.

ಯುಎನ್ಐ ಕೆಎಸ್ಆರ್ 1347