Sunday, Sep 26 2021 | Time 19:25 Hrs(IST)
National Share

ದೇಶದಲ್ಲಿ 34,703 ಹೊಸ ಪ್ರಕರಣ, 553 ಸಾವು ದಾಖಲು

ದೇಶದಲ್ಲಿ 34,703 ಹೊಸ ಪ್ರಕರಣ, 553 ಸಾವು ದಾಖಲು
ದೇಶದಲ್ಲಿ 34,703 ಹೊಸ ಪ್ರಕರಣ, 553 ಸಾವು ದಾಖಲು

ನವದೆಹಲಿ, ಜುಲೈ 6 (ಯುಎನ್ಐ ) ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 34,703 ಕೊರೋನ ಪ್ರಕರಣ ವರದಿಯಾಗಿದೆ.

ಕಳದೆ 111 ದಿನಗಳಲ್ಲಿ ಇದು ಅತ್ಯಂತ ಕಡಿಮೆ ಪ್ರಕರಣವಾಗಿದೆ. ಇದೆ ಅವಧಿಯಲ್ಲಿ ದೇಶದಲ್ಲಿ 553 ಸಾವು ವರದಿಯಾಗಿದೆ.ಸಕ್ರಿಯ ಪ್ರಕರಣಗಳು ಮತ್ತಷ್ಟು 4,64,357 ಕ್ಕೆ ಇಳಿಕೆಯಾಗಿದ್ದು, ಶೇಕಡ .97.17 ರಷ್ಟು ಚೇತರಿಕೆ ದರವಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳೆಂದರೆ 8,037 ಪ್ರಕರಣಗಳನ್ನು ಹೊಂದಿರುವ ಕೇರಳ, ನಂತರ ಮಹಾರಾಷ್ಟ್ರ 6,740, , ತಮಿಳುನಾಡು 3,715, ಕರ್ನಾಟಕಲ್ಲಿ 2,848, ಮತ್ತು ಒಡಿಶಾ ದಲ್ಲಿ 2,803 ಪ್ರಕರಣ ವರದಿಯಾಗಿದೆ. 553 ಸಾವುಗಳಲ್ಲಿ, ಮಹಾರಾಷ್ಟ್ರದಲ್ಲಿ (106) ಗರಿಷ್ಠ ಸಾವುನೋವುಗಳು ವರದಿಯಾಗಿವೆ, ನಂತರ ಕೇರಳದಲ್ಲಿ 102 ಸಾವು ದಾಖಲಾಗಿದೆ.

ಮೂರನೇ ಕೊರೋನ ಅಲೆ ಹತ್ತಿರವಾಗುತ್ತಿರುವ ಕಾರಣ ದೇಶವ್ಯಾಪಿ ಲಸಿಕಾ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ 35 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ.ಹಾಗೂ 2,ಕೋಟಿ 97ಲಕ್ಷ ಜನರು ಚೇತರಿಸಿಕೊಂಡಿದ್ದಾರೆ.ಎಂದೂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಯುಎನ್ಐ ಕೆಎಸ್ಆರ್ 1006

More News
ಅಧಿಕೃತ ಇಮೇಲ್ಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆಕ್ಷೇಪಣೆ ನಂತರ ಕೈಬಿಟ್ಟ ಎನ್ಐಸಿ

ಅಧಿಕೃತ ಇಮೇಲ್ಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆಕ್ಷೇಪಣೆ ನಂತರ ಕೈಬಿಟ್ಟ ಎನ್ಐಸಿ

24 Sep 2021 | 10:23 PM

ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಎನ್ಐಸಿಗೆ ಪತ್ರವನ್ನು ಬರೆದ ನಂತರ ಎನ್ಐಸಿ ಮೋದಿ ಭಾವಚಿತ್ರವುಳ್ಳ ಬ್ಯಾನರ್ ಅಂಚನ್ನು ಸುಪ್ರೀಂ ಕೋರ್ಟ್ನ ಅಧಿಕೃತ ಇಮೇಲ್ಗಳಿಂದ ತೆಗೆದುಹಾಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ, ಈ ಪ್ರಕಟಣೆಯಲ್ಲಿ ತನ್ನ ಇಮೇಲ್ಗಳ ಅಂಚಿಗೆ ಲಗತ್ತಿಸಿದ್ದ ಚಿತ್ರದ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

 Sharesee more..