Monday, Sep 20 2021 | Time 07:08 Hrs(IST)
National Share

ದೇಶದಲ್ಲಿ 38,792 ಹೊಸ ಕೊರೋನ ಪ್ರಕರಣ ಪತ್ತೆ, 624 ಸಾವು

ದೇಶದಲ್ಲಿ 38,792 ಹೊಸ ಕೊರೋನ ಪ್ರಕರಣ ಪತ್ತೆ, 624 ಸಾವು
ದೇಶದಲ್ಲಿ 38,792 ಹೊಸ ಕೊರೋನ ಪ್ರಕರಣ ಪತ್ತೆ, 624 ಸಾವು

ನವದೆಹಲಿ, ಜುಲೈ 14 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 38,792 ಹೊಸ ಕೊರೋನ ಪ್ರಕರಣಗಳು ಹಾಗೂ 624 ಸಾವಿನ ಪ್ರಕರಣಗಳು ಸಹ ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೇರಳ ಮಹಾರಾಷ್ಟ್ರ ತಮಿಳು ನಾಡು ಮತ್ತು ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ 624 ಹೊಸ ಸಾವು- ನೋವುಗಳು ವರದಿಯಾಗಿದೆ. ಜೊತೆಗೆ 41,ಸಾವಿರ ಜನರು ಗಣಮುಖರಾಗಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಳವಾಗಿದೆ. ಮಂಗಳವಾರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಮಾಡಿದ್ದಾರೆ . ಇದೇ 16 ರಂದು ಕರ್ನಾಟಕ ಸೇರಿದಂತೆ ಹಲವು ರಾಜಗಳ ಸಿಎಂ ಜೊತೆ ಮಾತುಕತೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ ಎಂದೂ ವರದಿಯಾಗಿದೆ.

ಯುಎನ್ಐ ಕೆಎಸ್ಆರ್ 1013