Monday, Sep 20 2021 | Time 07:42 Hrs(IST)
National Share

ದೇಶದಲ್ಲಿ 38,949 ಹೊಸ ಪ್ರಕರಣ, 542 ಜನರ ಸಾವು

ದೇಶದಲ್ಲಿ 38,949 ಹೊಸ ಪ್ರಕರಣ, 542 ಜನರ ಸಾವು
ದೇಶದಲ್ಲಿ 38,949 ಹೊಸ ಪ್ರಕರಣ, 542 ಜನರ ಸಾವು

ನವದೆಹಲಿ, ಜುಲೈ 6 (ಯುಎನ್ಐ) ದೇಶದಲ್ಲಿ ಕಳದೆ 24 ಗಂಟೆಯಲ್ಲಿ ಹೊಸದಾಗಿ 38,949 ಕೊರೋನಾ ಸೋಂಕು, ಪ್ರಕರಣ ವರದಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ 542 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಸದ್ಯ 31,026,829 ಕ್ಕೆ ಏರಿಕೆಯಾಗಿದೆ. ಕಳದೆ 24 ಗಂಟೆಯಲ್ಲಿ ಮಾರಕ ಸೋಂಕಿಗೆ 542 ಜನರು ಮೃತಪಟ್ಟಿದ್ದು ಇಲ್ಲಿಯವರೆಗೆ ಸಾವನ್ನಪ್ಪಿರುವವರ ಸಂಖ್ಯೆ 4ಲಕ್ಷ 12ಸಾವಿರಕ್ಕೆ ಏರಿಕೆಯಾಗಿದೆ.



ಸದ್ಯ ದೇಶದಲ್ಲಿ 430,422 ಸಕ್ರಿಯ ಪ್ರಕರಣಗಳಿವೆ ಸಚಿವಾಲಯದ ವರದಿ ಹೇಳಿದೆ.ಈವರೆಗೆ 44 ಕೋಟಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.



ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1 ಕೋಟಿ 95 ಲಕ್ಷ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ಈ ನಡುವೆ ಪ್ರಧಾನಿ ಮೋದಿ ಕೊರೋನ ನಿಯಂತ್ರಣ ಕುರಿತು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಯುಎನ್ಐ ಕೆಎಸ್ಆರ್ 1225