Monday, Sep 20 2021 | Time 06:49 Hrs(IST)
National Share

ದೇಶದಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು

ದೇಶದಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು
ದೇಶದಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು

ನವದೆಹಲಿ, ಜುಲೈ 1(ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಚಿತಪಟ್ಟಿದೆ.

ದೇಶದಲ್ಲಿ ಒಂದೇ ದಿನದಲ್ಲಿ ಸೋಂಕಿಗೆ 1,005 ಮಂದಿ ಮೃತಪಟ್ಟಿದ್ದು ಇದೇ ಅವಧಿಯಲ್ಲಿ 61,588 ಸೋಂಕಿತರು ಚೇತಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ 3,04,11,634 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,94,88,918 ಸೋಂಕಿತರು ಗುಣಮುಖರಾಗಿದ್ದಾರೆ.

ಕೊರೊನಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕೇರಳದಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ಕಂಡು ಬರುತ್ತಿದೆ. ದಕ್ಷಿಣದ ಈ ರಾಜ್ಯದಲ್ಲಿ 13,658 ಮಂದಿಗೆ ಸೋಂಕುತಗುಲಿರುವುದು ದೃಢವಾಗಿದೆ.

ಮಹಾರಾಷ್ಟ್ರದಲ್ಲಿ 9771 ಮಂದಿಗೆ, ತಮಿಳುನಾಡಿನಲ್ಲಿ 4506 ಮಂದಿಗೆ ಕೋವಿಡ್ ದೃಢವಾಗಿದೆ.

ಆಂಧ್ರ ಪ್ರದೇಶದಲ್ಲಿ 3797 ಮತ್ತು ಕರ್ನಾಟಕದಲ್ಲಿ 3382 ಹೊಸ ಕೊರೋನ ಸೋಂಕು ಪ್ರಕರಣ ಖಚಿತವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಯುಎನ್ಐ ಕೆಎಸ್ಆರ್ 1337