Sunday, Sep 26 2021 | Time 18:37 Hrs(IST)
Sports Share

ವಿಂಬಲ್ಡನ್: ಎರಡನೇ ಸುತ್ತಿಗೆ ಸಬಲೆಂಕಾ

ಲಂಡನ್, ಜೂ.28 (ಯುಎನ್ಐ)- ಎರಡನೇ ಶ್ರೇಯಾಂಕ ಆಟಗಾರ್ತಿ ಬಲ್ಗೇರಿಯಾದ ಆರ್ಯನಾ ಸಬಲೆಂಕಾ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್‌ನ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್ಯನಾ ಸಬಲೆಂಕಾ, ರೋಮೆನಿಯಾದ ಮೋನಿಕಾ ನಿಕುಲೆಸ್ಕ್ ಅವರನ್ನು ಎರಡು ನೇರ ಸೆಟ್‌ಗಳ ಆಟದಲ್ಲಿ 6-1, 6-4 ರಿಂದ ಪರಾಜಯಗೊಳಿಸಿ ಮುನ್ನಡೆದರು. ಮೊದಲ ಸೆಟ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಎರಡನೇ ಶ್ರೇಯಾಂಕದ ಆಟಗಾರ್ತಿ ಆರ್ಯನಾ, ಸೆಟ್‌ನ್ನು ಹೆಚ್ಚಿನ ಪರಿಶ್ರಮವಿಲ್ಲದೇ ಜಯ ಸಾಧಿಸಿದರು.

23 ವರ್ಷ ವಯಸ್ಸಿನ ಆರ್ಯನಾ ಸಬಲೆಂಕಾ, ತಮಗಿಂತ ಹತ್ತು ವರ್ಷ ಹಿರಿಯರಾದ ೧೯೧ ನೇ ರ್‍ಯಾಂಕಿಂಗ್ ಹೊಂದಿರುವ ಮೋನಿಕಾ ನಿಕುಲೆಸ್ಕ್ ಅವರನ್ನು ಒಂದು ಗಂಟೆ 16 ನಿಮಿಷಗಳ ಆಟದಲ್ಲಿ ಪರಾಜಯಗೊಳಿಸಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಆರ್ಯನಾ ಸಬಲೆಂಕಾ, ಅರ್ಹತಾ ಸುತ್ತಿನ ಸ್ಪರ್ಧೆಯ ಮೂಲಕ ಮುಖ್ಯ ಸುತ್ತಿಗೆ ಪ್ರವೇಶಿಸಿರುವ ಅಮೆರಿಕೆಯ ಡೆನಿಲ್ಲಾ ಲಾವೊ ಇಲ್ಲವೇ ವೈಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಬ್ರಿಟಿಷ್‌ನ ಕಾಟೈಯ್ ಬೌಲ್ಟರ್ ಅವರನ್ನು ಎದುರಿಸಲಿದ್ದಾರೆ.

ಯುಎನ್ಐ ವಿಎನ್ಎಲ್ 2133