Monday, Sep 20 2021 | Time 07:35 Hrs(IST)
National Share

ದೆಹಲಿ ಏಮ್ಸ್ ನಲ್ಲಿ ಬೆಂಕಿ, ರೋಗಿಗಳ ಸ್ಥಳಾಂತರ

ನವದೆಹಲಿ , ಜೂನ್ 28 (ಯುಎನ್ಐ) ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸ್ಟೋರ್ ರೂಮ್ ನಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ತುರ್ತು ವಿಭಾಗದ ಆಪರೇಷನ್ ಥಿಯೇಟರ್ ಪಕ್ಕದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ.ಆದರೆ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
7 ಅಗ್ನಿಶಾಮಕ ಯಂತ್ರಗಳನ್ನು ಸ್ಥಳಕ್ಕೆ ನಿಯೊಜಿಸಲಾಗಿತ್ತು ಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ. ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು, ಬೆಂಕಿಯ ನಂತರ ರೋಗಿಗಳನ್ನು ಸ್ಥಳಾಂತರಿಸಲಾಗಿದೆ.ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಮತ್ತು ಯಾವುದೇ ಸಾವು – ನೋವು. ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಯುಎನ್ಐ ಕೆಎಸ್ಆರ್ 1024