Monday, Sep 20 2021 | Time 07:59 Hrs(IST)
National Share

ದೆಹಲಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ

ದೆಹಲಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ
ದೆಹಲಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ

ನವದೆಹಲಿ, ಜುಲೈ 7 (ಯುಎನ್ಐ) ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ಗಡಿ ದಾಟಿ ಹೋಗಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 31 ರಿಂದ 39 ಪೈಸೆ ಹೆಚ್ಚಳವಾಗಿದೆ.ಡೀಸೆಲ್ ಬೆಲೆ ಲೀಟರ್ 16 ರಿಂದ 23 ಪೈಸೆ ಹೆಚ್ಚಳವಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೇಶಾದ್ಯಂತ ತಯಳ ಬೆಲಗಳು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಇದೆ ರೀತಿ ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 103.56 ರೂ., ಡೀಸೆಲ್ ಪ್ರತಿ ಲೀಟರ್ ಗೆ 94.89 ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ಕೋಲ್ಕತ್ತಾದ ಸಗಟು ವ್ಯಾಪಾರಿಗಳು ಇಂದು 30 ನಿಮಿಷಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ತೈಲ ಕಂಪನಿಗಳು ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸುತ್ತವೆ ಈ ನಡುವೆ ತೈಲ ದರ ಹೆಚ್ಚಳ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಸೈಕಲ್ ಜಾಥಾ ಹಮ್ಮಿಕೊಂಡಿದೆ.

ಯುಎನ್ಐ ಕೆಎಸ್ಆರ್ 0953