Sunday, Sep 26 2021 | Time 19:26 Hrs(IST)
Sports Share

ವಿಂಬಲ್ಡನ್: ಕ್ವಾರ್ಟರ್ ಫೈನಲ್‌ಗೆ ಬಾರ್ಟಿ, ಜೋಕೊವಿಚ್

ಲಂಡನ್, ಜು.5 (ಯುಎನ್ಐ)- ಅಗ್ರ ಶ್ರೇಯಾಂಕಿತ ಆಟಗಾರ ನೋವಾಕ್ ಜೋಕೊವಿಚ್ ಹಾಗೂ ಆಸ್ಟ್ರೇಲಿಯಾದ ಆಟಗಾರ್ತಿ ಆಶ್ಲೆ ಬಾರ್ಟಿ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್‌ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದ್ದಾರೆ.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸರ್ಬಿಯಾದ ಜೋಕೊವಿಚ್ 6-2, 6-4, 6-2 ರಿಂದ ಚೀಲಿಯ ಕ್ರಿಸ್ಟಿಯನ್ ಗರಿನ್ ಅವರನ್ನು ಒಂದು ಗಂಟೆ 49 ನಿಮಿಷಗಳ ಹೋರಾಟದಲ್ಲಿ ಮುನ್ನಡೆದರು.

ಮಹಿಳೆಯರ ಪ್ರಿ ಕಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಾರ್ಟಿ, ಹದಿನಾಲ್ಕನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಬಾರ್ಬೋರಾ ಕರ್ಜೆಸಿಕೋವಾ ಅವರನ್ನು 7-5, 6-2 ರಿಂದ ಎರಡು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ಎಂಟರ ಹಂತ ಕಂಡರು.

ಮಹಿಳಾ ವಿಭಾಗದ ಸಿಂಗಲ್ಸ್‌ನ ಇನ್ನೊಂದು ಹದಿನಾರರ ಹಂತದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬೆಲಾರಸ್‌ನ ಆರ್ಯನಾ ಸಬಲೆಂಕಾ 6-3, 4-6, 6-3 ರಿಂದ ರಷ್ಯಾ ಮೂಲದ 18 ನೇ ಶ್ರೇಯಾಂಕದ ಆಟಗಾರ್ತಿ ಎಲೆನಾ ರಯಾಬಕೋನಾ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದರು.

ಇನ್ನೊಂದು ಪಂದ್ಯದಲ್ಲಿ ಟುನೀಯಾದ ಆನ್ಸ್ ಜಬೂರ್ ಅವರು ಪೋಲೆಂಡ್‌ನ ಇಗಾ ಸ್ವಿಂಟೆಕ್ ಅವರನ್ನು ಸೋಲಿಸಿ ಮುನ್ನಡೆದರು.

ಇಟಲಿಯ ಮ್ಯಾಟೆರೊ ಬೆರೆಟ್ಟಿನಿ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಪುರುಷರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ಸ್ ಹಂತ ಕಂಡಿದ್ದಾರೆ.

ಸೋಮವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್‌ನ ಹದಿನಾರರ ಸುತ್ತಿನ ಪಂದ್ಯದಲ್ಲಿ ಮ್ಯಾಟೆರೊ ಬೆರೆಟ್ಟಿನಿ, ಆಲ್ ಇಂಗ್ಲೆಂಡ್ ಕ್ಲಬ್‌ನ ಯುವ ಆಟಗಾರ ಐಲ್‌ಯಾ ಇವಾಶೋಕಾ ಅವರನ್ನು ಮೂರು ನೇರ ಸೆಟ್‌ಗಳ ಆಟದಲ್ಲಿ ಪರಾಜಯಗೊಳಿಸಿ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದರು.

ಯುಎನ್ಐ ವಿಎನ್ಎಲ್ 2210