Sunday, Sep 26 2021 | Time 17:40 Hrs(IST)
Sports Share

ವಿಂಬಲ್ಡನ್: ಬಾರ್ಟಿ ನಾಲ್ಕನೇ ಸುತ್ತಿಗೆ

ಲಂಡನ್, ಜು.4 (ಯುಎನ್ಐ)- ವಿಶ್ವದ ‌ಅಗ್ರ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ ಮತ್ತು ಪುರುಷರ ಎರಡನೇ ಶ್ರೇಯಾಂಕಿತ ರಷ್ಯಾದ ಡೇನಿಲ್ ಮೆಡ್ವೆಡೆವ್ ತಮ್ಮ ಪಂದ್ಯಗಳನ್ನು ಗೆದ್ದು ವರ್ಷದ ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ನಾಲ್ಕನೇ ಸುತ್ತಿಗೆ ಮುನ್ನಡೆದರು.

ಮಹಿಳೆಯರಲ್ಲಿ ಅಗ್ರ ಶ್ರೇಯಾಂಕಿತ ಬಾರ್ಟಿ ಶನಿವಾರ ನಡೆದ ಮೂರನೇ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಕಟಾರಿನಾ ಸಿನಿಯಕೋವಾ ಅವರನ್ನು 6-3, 7-5ರಿಂದ ಒಂದು ಗಂಟೆ 37 ನಿಮಿಷಗಳಲ್ಲಿ ಸೋಲಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಪಡೆಯಲು ಬಾರ್ಟಿ 16 ನೇ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್‌ಕೋವಾ ಅವರನ್ನು ಎದುರಿಸಲಿದ್ದಾರೆ.

ಪುರುಷರ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತ ಮೆಡ್ವೆಡೆವ್ ಕ್ರೊಯೇಷಿಯಾದ ಮರಿನ್ ಸಿಲಿಕ್ ಅವರನ್ನು 6-7, 3-6, 6-3, 6-3, 6-2 ಸೆಟ್‌ಗಳಿಂದ ಸೋಲಿಸಿದರು. ಐದು ಸೆಟ್‌ಗಳ ಪಂದ್ಯ ಮೂರು ಗಂಟೆ 36 ನಿಮಿಷಗಳ ಕಾಲ ನಡೆಯಿತು.

ಯುಎನ್ಐ ವಿಎನ್ಎಲ್ 2053