Sunday, Sep 26 2021 | Time 18:26 Hrs(IST)
Sports Share

ಮೊಹನ್ ಬಗಾನ್ ತಂಡ ಸೇರಿದ ಜಾನಿ

ಕೋಲ್ಕತ್ತಾ, ಜೂ.26 (ಯುಎನ್ಐ)- ಪ್ರಸ್ತುತ ಯುರೋ ಕಪ್‌ನಲ್ಲಿ ಆಡುತ್ತಿರುವ ಫಿನ್‌ಲ್ಯಾಂಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಜಾನಿ ಕೌಕೊ, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನ ಮುಂದಿನ ಋತುವಿನಲ್ಲಿ ಎಟಿಕೆ ಮೋಹನ್ ಬಗಾನ್ ಪರ ಆಡಲಿದ್ದು ಶನಿವಾರ ಸಹಿ ಹಾಕಿರುವ ಬಗ್ಗೆ ಕ್ಲಬ್ ಮಾಹಿತಿ ನೀಡಿದೆ.

"ಅನೇಕ ಸ್ಟಾರ್ ಫುಟ್ಬಾಲ್ ಆಟಗಾರರು ಇಂಡಿಯನ್ ಸೂಪರ್ ಲೀಗ್ ನಲ್ಲಿ ಆಡಿದ್ದಾರೆ. ಆದರೆ ಫುಟ್ಬಾಲ್ ಆಟಗಾರ ಯುರೋ ಕಪ್ ನಲ್ಲಿ ಆಡಿದ ಮೂರು ದಿನಗಳ ಒಳಗೆ ಭಾರತೀಯ ಕ್ಲಬ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದು ಅಸಾಮಾನ್ಯವಾಗಿದೆ" ಎಂದು ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.

30 ವರ್ಷದ ಕೌಕೊ ವೃತ್ತಿಪರ ಫುಟ್ಬಾಲ್ ಆಟಗಾರರಾಗಿದ್ದು, ಫಿನ್ಲೆಂಡ್ ರಾಷ್ಟ್ರೀಯ ತಂಡವನ್ನು ಮಿಡ್‌ಫೀಲ್ಡರ್ ಆಗಿ ಪ್ರತಿನಿಧಿಸುತ್ತಾರೆ. ಈ ವರ್ಷದ ಯುರೋ ಕಪ್ ಗ್ರೂಪ್ ಲೀಗ್‌ನ ಎಲ್ಲಾ ಮೂರು ಪಂದ್ಯಗಳಲ್ಲಿ ಆಡಿರುವ ಅವರು ಒಂದೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಅವರು ಕಳೆದ ಮೂರು ಋತುಗಳಲ್ಲಿ ಡ್ಯಾನಿಶ್ ಕ್ಲಬ್ ಎಸ್ಬರ್ಜ್ ಪರ ಆಡುತ್ತಿದ್ದಾರೆ. ಕ್ಲಬ್ ಫುಟ್‌ಬಾಲ್‌ನಲ್ಲಿ ಕೌಕೊ ಹಲವಾರು ಗೋಲುಗಳನ್ನು ಹೊಂದಿದ್ದಾರೆ.

ಎಟಿಕೆ ಮೋಹನ್ ಬಗಾನ್ ಕೆಲವೇ ದಿನಗಳಲ್ಲಿ ಎಎಫ್‌ಸಿ ಕಪ್ ಆಡಬೇಕಾಗಿರುವುದು ಗಮನಾರ್ಹವಾಗಿದೆ ಮತ್ತು ಕೌಕೊ ಸೇರ್ಪಡೆ ಆಂಟೋನಿಯೊ ಲೋಪೆಜ್ ಹಬಾಸ್ ತಂಡದ ಮಿಡ್‌ಫೀಲ್ಡ್ ಬಲವನ್ನು ಹೆಚ್ಚಿಸುತ್ತದೆ.

ಯುಎನ್ಐ ವಿಎನ್ಎಲ್ 1824