Monday, Sep 20 2021 | Time 07:46 Hrs(IST)
Sports Share

ವಿಂಬಲ್ಡನ್: ಅಂಕಿತಾ ಜೋಡಿಗೆ ಸೋಲು

ಲಂಡನ್, ಜು.2 (ಯುಎನ್ಐ)- ಮೊಟ್ಟ ಮೊದಲ ಬಾರಿಗೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತದ ಯುವ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಮೊದಲ ಸುತ್ತಿನಲ್ಲಿಯೇ ಸೋಲಿನ ಕಹಿ ಕಂಡಿದ್ದಾರೆ.

ಮಹಿಳಾ ವಿಭಾಗದ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಂಕಿತಾ ರೈನಾ ಹಾಗೂ ಅವರ ಅಮೆರಿಕೆಯ ಜೊತೆಗಾರ್ತಿ ಲಾರೆನ್ ಡೇವಿಸ್ ಜೋಡಿ 2-6, 2-6 ರಿಂದ ಅಮೆರಿಕೆಯ ಅಸಿಯಾ ಮುಹಮ್ಮದ್ ಹಾಗೂ ಜೆಸ್ಸಿಕಾ ಪೆಗುಲಾ ಜೋಡಿಯ ಕೈಯಲ್ಲಿ ಎರಡು ನೇರ ಸೆಟ್‌ಗಳ ಆಟದಲ್ಲಿ ಪರಾಜಯಗೊಂಡಿತು.

14 ನೇ ಶ್ರೇಯಾಂಕದ ಅಮೆರಿಕೆಯ ಅಸಿಯಾ ಮುಹಮ್ಮದ್ ಹಾಗೂ ಜೆಸ್ಸಿಕಾ ಪೆಗುಲಾ ಜೋಡಿ, ಇಂಡೋ-ಅಮೆರಿಕೆಯ ಅಂಕಿತಾ ಹಾಗೂ ಲಾರೆನ್ ಜೋಡಿಯನ್ನು ಒಂದು ಗಂಟೆ 10ನಿಮಿಷಗಳ ಆಟದಲ್ಲಿ ಸೋಲು ಕಂಡಿತು.

ಅಂಕಿತಾ ರೈನಾ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಸೋಲಿನ ಕಹಿ ಅನುಭವಿಸಿದರೂ, ವಿಂಬಲ್ಡನ್‌ನ ಮಿಶ್ರ ಡಬಲ್ಸ್‌ನಲ್ಲಿ ಭಾರತದವರೇ ಆದ ರಾಮಕುಮಾರ್ ರಾಮನಾಥನ್ ಅವರೊಂದಿಗೆ ಜೊತೆಗೂಡಿ ಆಡಲಿದ್ದಾರೆ. ಈ ಜೋಡಿ ಭಾರತದ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿಯನ್ನು ಎದುರಿಸಲಿದೆ.

ಭಾರತದ ಸಾನಿಯಾ ಮಿರ್ಜಾ ಹಾಗೂ ಬೆಥನಿ ಮ್ಯಾಟಕ್ ಸ್ಯಾಂಡ್ಸ್ ಜೋಡಿ, ಮಹಿಳಾ ವಿಭಾಗದ ಡಬಲ್ಸ್‌ನ ಎರಡನೇ ಸುತ್ತು ಪ್ರವೇಶಿಸಿದ್ದರೆ, ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದೆ.
ಯುಎನ್ಐ ವಿಎನ್ಎಲ್ 2019