Monday, Sep 20 2021 | Time 07:01 Hrs(IST)
National Share

ರಾಜಧಾನಿ ವಲಯದಲ್ಲಿ ಲಘು ಭೂಕಂಪನ, ಹಾನಿ ವರದಿಯಿಲ್ಲ

ನವದೆಹಲಿ, ಜುಲೈ 6 (ಯುಎನ್ಐ) ರಾಜಧಾನಿ ವಲಯದಲ್ಲಿ ತಿಂಗಳು ತುಂಬುವ ಮುನ್ನವೇ ಕಳೆದ ರಾತ್ರಿ ಎರಡನೇ ಬಾರಿಗೆ ಭೂ ಕಂಪನವಾಗಿದೆ.

ಹರಿಯಾಣ ಬಳಿ ಲಘು ಭೂಕಂಪ ಸಂಭವಿಸಿದ್ದು ಆದರೆ ಕಂಪನದಿಂದ ಸದ್ಯ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಕಳೆದ ತಿಂಗಳ 20ರಂದು ಲಘು ಭೂಕಂಪ ಸಂಭವಿಸಿತ್ತು. ಕಳೆದ ರಾತ್ರಿ ಸಂಭವಿಸಿದ ಕಂಪನದ ತೀವ್ರತೆ 3.5 ರಷ್ಟು ಇತ್ತು ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ.
ಯುಎನ್ಐ ಕೆಎಸ್ಆರ್ 0915