Monday, Sep 20 2021 | Time 07:22 Hrs(IST)
National Share

ರೈತರ ಪ್ರತಿಭಟನೆ: ಜಂತರ್ ಮಂತರ್ ನಲ್ಲಿ ಬಿಗಿ ಭದ್ರತೆ

ರೈತರ ಪ್ರತಿಭಟನೆ: ಜಂತರ್ ಮಂತರ್ ನಲ್ಲಿ ಬಿಗಿ ಭದ್ರತೆ
ರೈತರ ಪ್ರತಿಭಟನೆ: ಜಂತರ್ ಮಂತರ್ ನಲ್ಲಿ ಬಿಗಿ ಭದ್ರತೆ

ನವದೆಹಲಿ, ಜುಲೈ 22(ಯುಎನ್ಐ) ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಆರಂಭಿಸುವುದಕ್ಕೆ ಮುನ್ನವೇ ಜಂತರ್ ಮಂತರ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಮಂಗಳವಾರ, ದೆಹಲಿ ಸರ್ಕಾರ ಮತ್ತು ಪೊಲೀಸರು ಜುಲೈ 22 ರಿಂದ ಆಗಸ್ಟ್ 9 ರವರೆಗೆ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ನಡುವೆ ಐತಿಹಾಸಿಕ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ಅನುಮತಿ ನೀಡಿದರು.

ಆದಾಗ್ಯೂ, ಅಧಿಕಾರಿಗಳು ಪ್ರತಿಭಟನಾಕಾರರ ಅನುಮತಿ ಮಿತಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಎಸ್‌ಕೆಎಂ ಗೆ 200 ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಕೆಎಂಎಸ್‌ಸಿ ಗೆ ಆರು ಎಂದು ಗುರುತಿಸಿದ್ದಾರೆ. ಮುಂಗಾರು ಅಧಿವೇಶನ ನಡೆಯುತ್ತಿರುವ ಸಂಸತ್ತು ಮತ್ತು ಜಂತರ್ ಮಂತರ್‌ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಕೆಎಂನಿಂದ 200 ಪ್ರತಿಭಟನಾಕಾರರು ಮತ್ತು ಕೆಎಂಎಸ್‌ಸಿಯಿಂದ ಆರು ಮಂದಿ ಪೊಲೀಸ್ ಬೆಂಗಾವಲಿನೊಂದಿಗೆ ಸಿಂಗು ಗಡಿಯಿಂದ ಜಂತರ್ ಮಂತರ್‌ಗೆ ತೆರಳಲಿದ್ದಾರೆ. ಅಂತೆಯೇ ಸಂಜೆ 5 ಗಂಟೆಯ ಹೊತ್ತಿಗೆ ಸಿಂಗು ಗಡಿಗೆ ಮರಳುತ್ತಾರೆ. ನಿಗದಿತ ಜಾಗದಲ್ಲಿ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು, ಕೋವಿಡ್ 19 ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿರುವುದಾಗಿ ಪೊಲೀಸರು ಕೇಳಿದ್ದಾರೆ. ದೆಹಲಿಯ ಕಳೆದ ವರ್ಷ ಡಿಸೆಂಬರ್‌ನಿಂದ ಕೃಷಿ ಕಾನೂನುಗಳ ವಿರುದ್ಧ ಮೂರು ಗಡಿಗಳಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾನೂನು ರದ್ದುಪಡಿಸಬೇಕೆಂಬ ಪಟ್ಟು ಸಡಿಲಿಸದ ಕಾರಣ, ರೈತ ಸಂಘಟನೆಗಳು ಮತ್ತು ಸರ್ಕಾರದ ನಡುವಿನ ಹಲವಾರು ಸುತ್ತಿನ ಮಾತುಕತೆಗಳು ವಿಫಲವಾಗಿವೆ.

ಅವರ ಬೇಡಿಕೆಗೆ ಸರ್ಕಾರ ಇನ್ನೂ ಸಮ್ಮತಿಸದಿದ್ದರೂ, ಅದು 18 ತಿಂಗಳ ಕಾಲ ಕಾನೂನುಗಳನ್ನು ತಡೆಹಿಡಿದಿದೆ.

ಜನವರಿ 26 ಗಣರಾಜ್ಯೋತ್ಸವದಂದು ಸಂಘಟನೆಗಳು ಆಯೋಜಿಸಿದ್ದ ಟ್ರ್ಯಾಕ್ಟರ್ ಪೆರೇಡ್ ಹಿಂಸಾತ್ಮಕವಾಗಿದ್ದರಿಂದ ಪ್ರತಿಭಟನೆಯು ಕೆಟ್ಟ ಹೆಸರನ್ನು ಗಳಿಸಿತು. ಹಲವಾರು ಪ್ರತಿಭಟನಾಕಾರರು ನಿಯೋಜಿತ ಮಾರ್ಗದಿಂದ ವಿಮುಖರಾದರು, ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಮತ್ತು ಐತಿಹಾಸಿಕ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ನೆಟ್ಟಿದ್ದರು.

ಯುಎನ್ಐ ಎಸ್ಎ 1229