Monday, Sep 20 2021 | Time 07:49 Hrs(IST)
National Share

ಮಾದಕ ದ್ರವ್ಯಗಳಿಂದ ವಿನಾಶ: ಪ್ರಧಾನಿ ಮೋದಿ

ನವದೆಹಲಿ, ಜೂನ್ 26 (ಯುಎನ್‌ಐ) ಮಾದಕ ದ್ರವ್ಯ ಮತ್ತು ಕಾನೂನುಬಾಹಿರ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ಶ್ಲಾಘಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ, '' ಇಂದು, ಮಾದಕವಸ್ತು ಮತ್ತು ಅಕ್ರಮ ವಿರುದ್ಧ ಅಂತಾರಾಷ್ಟ್ರೀಯ ದಿನ. ಈ ದಿನದಂದು ಕಳ್ಳಸಾಗಣೆ, ನಮ್ಮ ಸಮಾಜದಿಂದ ಮಾದಕ ದ್ರವ್ಯಗಳ ಭೀತಿಯನ್ನು ತೊಡೆದುಹಾಕಲು ತಳಮಟ್ಟದಲ್ಲಿ ಕೆಲಸ ಮಾಡುವ ಎಲ್ಲರನ್ನು ನಾನು ಶ್ಲಾಘಿಸುತ್ತೇನೆ. ಸೇವ್‌ಲೈವ್ಸ್‌ಗೆ ಅಂತಹ ಪ್ರತಿಯೊಂದು ಪ್ರಯತ್ನವೂ ಅತ್ಯಗತ್ಯ. ಮಾದಕ ದ್ರವ್ಯ ಬದುಕಿನಲ್ಲಿ ಕತ್ತಲೆ ತುಂಬುತ್ತವೆ, ಮತ್ತು ವಿನಾಶವನ್ನು ತರುತ್ತವೆ '' ಎಂದಿದ್ದಾರೆ.
“ಶೇರ್ ಫ್ಯಾಕ್ಟ್ಸ್ ಆನ್ ಡ್ರಗ್ಸ್ ಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ಮತ್ತು ಮಾದಕ ದ್ರವ್ಯಮುಕ್ತ ಭಾರತಕ್ಕೆ ಯತ್ನಿಸೋಣ'' ಎಂದು ಪ್ರಧಾನಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾದಕ ದ್ರವ್ಯದ ವಿಚಾರವಿರುವ ಹಳೆಯ 'ಮನ್ ಕಿ ಬಾತ್' ಸರಣಿಯನ್ನು ಹಂಚಿಕೊಂಡಿದ್ದಾರೆ, ಇದು ಭೀತಿಯನ್ನು ನಿವಾರಿಸುವ ಹಲವು ಅಂಶಗಳನ್ನು ಒಳಗೊಂಡಿದೆ.
ಮಾದಕವಸ್ತು ಮುಕ್ತ ಪ್ರಪಂಚದ ಗುರಿಯನ್ನು ಸಾಧಿಸುವಲ್ಲಿ ಕ್ರಮ ಮತ್ತು ಸಹಕಾರವನ್ನು ಬಲಪಡಿಸುವ ಪ್ರಯತ್ನದಲ್ಲಿ, ವಿಶ್ವಸಂಸ್ಥೆಯು, ಡಿಸೆಂಬರ್ 7, 1987 ರಂದು, ಜೂನ್ 26 ಅನ್ನು ಮಾದಕ ದ್ರವ್ಯ ಮತ್ತು ಕಾನೂನುಬಾಹಿರ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವೆಂದು ಗುರುತಿಸಲು ನಿರ್ಧರಿಸಿತು.
ಯುಎನ್ಐ ಎಸ್ಎ 1404