Wednesday, Oct 20 2021 | Time 15:55 Hrs(IST)
Special Share

ಕೆಲವೇ ಗಂಟೆಗಳ ಅವಧಿಯಲ್ಲಿ 21 ಕೋಟಿ ರೂ ಸಂಪಾದನೆ !

ನವದೆಹಲಿ, ಸೆ 17(ಯುಎನ್‌ ಐ) ರಾಕೇಶ್ ಝನ್‌ ಝನ್‌ ವಾಲಾ ʼದಿ ಬಿಗ್ ಬುಲ್ʼ .. ಮತ್ತೊಮ್ಮೆ ತನ್ನ ಮ್ಯಾಜಿಕ್‌ ಪುನರಾವರ್ತಿಸಿದ್ದಾರೆ. ಷೇರು ಮಾರುಕಟ್ಟೆಯ ವಿದ್ವಾಂಸ ಎಂದೇ ಹೆಸರುವಾಸಿಯಾಗಿರುವ ಈ ಏಸ್ ಇನ್‌ ವೆಸ್ಟರ್‌ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಸಾವಿರಾರು ಕೋಟಿಗಳನ್ನು ಸಂಪಾದಿಸಿರುವ ಈ ಕುಬೇರನ ಖಾತೆಗೆ ಇನ್ನೂ ಕೆಲವು ಕೋಟಿಗಳು ಸೇರಿವೆ. ಅದು ಕೂಡ ಕೇವಲ 24 ಗಂಟೆಗಳಲ್ಲಿ ಎಂಬುದು ವಿಶೇಷ
ಇತ್ತೀಚಿಗೆ ಜಿ ಮೀಡಿಯಾ ಗುಂಪಿನ ಷೇರುಗಳು ಮಾರುಕಟ್ಟೆಯಲ್ಲಿ ಏರುಪೇರುಗೊಂಡಿದ್ದವು ಜಿ ಗುಂಪಿನ ಎಂ ಡಿ ಸ್ಥಾನದಿಂದ ಪುನೀತ್ ಗೊಯೆಂಕಾ ಅವರನ್ನು ತೆಗೆದುಹಾಕುವಂತೆ ಹೂಡಿಕೆದಾರರು ಆಗ್ರಹಿಸಿದ್ದರು. ಇದರಿಂದ ಸೆಪ್ಟೆಂಬರ್ 14 ರ ಮಂಗಳವಾರ ಆ ಕಂಪನಿಯ ಷೇರುಗಳು ಕುಸಿಯಲು ಆರಂಭಿಸಿದವು. ಆ ಕಂಪನಿಯ ಷೇರುಗಳು ರೂ. 220.44 ರೂ ಸಮೀಪದಲ್ಲಿದ್ದಾಗ ಅವುಗಳ ಮೇಲೆ ಬಿಗ್‌ಬುಲ್ ರಾಕೇಶ್ ಝನ್‌ ಝನ್‌ ವಾಲಾ ಗೆ ಸೇರಿದ ರಾರೇ ಕಂಪನಿ ಕಣ್ಣಾಕಿತು. ಅದೇ ದರದಲ್ಲಿ ಒಂದೇ ಬಾರಿ 50 ಲಕ್ಷ ಷೇರುಗಳನ್ನು ಖರೀದಿಸಿತು.
ಒಂದು ಷೇರು ದರ 220.44 ಸಮೀಪದಲ್ಲಿದ್ದಾಗ ರಾಕೇಶ್‌ ಝನ್‌ ಝನ್‌ ವಾಲಾ ಭಾರಿ ಪ್ರಮಾಣದಲ್ಲಿ ಷೇರು ಖರೀದಿಸಿದ್ದಾರೆ ಎಂಬ ಭಾರಿ ಪ್ರಚಾರದ ನಂತರ ಷೇರು ದರ ಚೇತರಿಸಿಕೊಂಡವು. ಆದೇ ದಿನ ಸಂಜೆ ಒಂದು ಷೇರು ಬೆಲೆ 261.50 ರೂ ಸಮೀಪಿಸಿತು. ಇದರಿಂದ ಸರಾಸರಿ 20 ಕೋಟಿ ರೂಪಾಯಿ ಆದಾಯ ಝನ್‌ ಝನ್‌ ವಾಲಾ ಖಾತೆಗೆ ಸೇರಿತು. ಗುರುವಾರ ಮಾರ್ಕೆಟ್‌ ಮುಗಿದ ಸಮಯದಲ್ಲಿ ಷೇರು ಬೆಲೆ 52 ವಾರಗಳ ಗರಿಷ್ಟ ಮಟ್ಟತಲುಪಿ ಇಂಟ್ರಾಡೆಲ್‌ 295.15 ಸಮೀಪ ಮಾರಾಟಗೊಂಡು ಆತನ ಖಾತೆಗೆ ಮತ್ತಷ್ಟು ಸಂಪತ್ತು ಹರಿದುಹೋಗುವಂತೆ ಮಾಡಿತು
ಯುಎನ್‌ ಐ ಕೆವಿಆರ್‌ 1946