Sunday, Sep 26 2021 | Time 17:32 Hrs(IST)
Special Share

ಕೇರಳ: ಮಾಜಿ ಸಚಿವ ಕೆ.ಶಂಕರನಾರಾಯಣ ಪಿಳ್ಳೈ ನಿಧನ

ತಿರುವನಂತಪುರಂ, ಜುಲೈ 20(ಯುಎನ್ಐ) ಕೇರಳದ ಮಾಜಿ ಸಾರಿಗೆ ಸಚಿವ ಕೆ.ಶಂಕರನಾರಾಯಣ ಪಿಳ್ಳೈ ಅವರು ಸೋಮವಾರ ರಾತ್ರಿ ನೆಡುಮಂಗಡದ ಪಳಾವವಡಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಪತ್ನಿ ಗಿರಿಜಾ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅಶ್ವತಿ ಶಂಕರ್ ಮತ್ತು ಅಂಬಿಲಿ ಶಂಕರ್ ಅವರನ್ನು ಅಗಲಿರುವ ಮಾಜಿ ಸಚಿವರು ನಿನ್ನೆ ರಾತ್ರಿ 11.30ಕ್ಕೆ ತಮ್ಮ ಮನೆಯಲ್ಲಿ ಜ್ಞಾನತಪ್ಪಿದ ಹಿನ್ನೆಲೆಯಲ್ಲಿ ನೆಡುಮಂಗಡದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಬಳಿಕ ಪಾರ್ಥಿವ ಶರೀರವನ್ನು ಶವವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಸಂಜೆ ನೆಡುಮಂಗಡದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕೆ.ಎಸ್.ಯು ಮೂಲಕ ರಾಜಕೀಯ ಪ್ರವೇಶಿಸಿದ ಶಂಕರನಾರಾಯಣ ಪಿಳ್ಳೈ, ತಿರುವನಂತಪುರ ಜಿಲ್ಲೆಯ ಕೆಎಸ್‌ಯು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 1969 ರಿಂದ 1972 ರವರೆಗೆ ತಿರುವನಂತಪುರದ ಡಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1980 ರಲ್ಲಿ ಅವರು ಕಾಂಗ್ರೆಸ್ (ಎಸ್) ಪ್ರಧಾನ ಕಾರ್ಯದರ್ಶಿಯಾದರು. ಕಾಂಗ್ರೆಸ್ (ಎಸ್) ಪಕ್ಷವನ್ನು ಪ್ರತಿನಿಧಿಸುವ ತಿರುವನಂತಪುರ ಪೂರ್ವ ಕ್ಷೇತ್ರದಿಂದ 1982 ಮತ್ತು 1987 ರಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ನಂತರ, ಅವರು ಕೇರಳ ವಿಕಾಸ್ ಪಾರ್ಟಿ ಎಂಬ ಹೊಸ ಪಕ್ಷವನ್ನು ರಚಿಸಿದರು, ಅದು ನಂತರ ಐಎನ್‌ಸಿಯೊಂದಿಗೆ ವಿಲೀನಗೊಂಡಿತು.
ಶಂಕರನಾರಾಯಣ ಅವರು ಇ.ಕೆ. ನಾಯನಾರ್ ಸಂಪುಟದಲ್ಲಿ 1987 ರಿಂದ 1991ರ ವರೆಗೆ ಸಾರಿಗೆ ಸಚಿವರಾಗಿದ್ದರು. ಕೆಎಸ್‌ಇಬಿ, ಅಧ್ಯಕ್ಷ, ಟ್ಯಾಕ್ಸಿ ಡ್ರೈವರ್ಸ್ ಕೋ-ಆಪರೇಟಿವ್ ಸೊಸೈಟಿ, ಕೇರಳ ರಾಜ್ಯ ಹಣಕಾಸು ಉದ್ಯಮಗಳ ನಿರ್ದೇಶಕ ಮತ್ತು ಕೇರಳ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಯುಎನ್ಐ ಎಸ್ಎ 1132