Sunday, Sep 26 2021 | Time 18:36 Hrs(IST)
Special Share

ಮಂಗಳೂರು- ಮುಂಬೈ ನಡುವಣ ರೈಲು ಸೇವೆ ಪುನರಾರಂಭ

ಮಂಗಳೂರು, ಜುಲೈ 24(ಯು ಎನ್‌ ಐ) ನಿರಂತರ ಮಳೆಯಿಂದಾಗಿ ವ್ಯತ್ಯಯಗೊಂಡಿದ್ದ ಕೊಂಕಣ ರೈಲು ಮಾರ್ಗದ ಮಂಗಳೂರು- ಮುಂಬೈ ನಡುವಣ ರೈಲು ಸೇವೆಯನ್ನು ಶನಿವಾರ ಬೆಳಗ್ಗೆಯಿಂದ ಪುನರಾರಂಭಿಸಲಾಗಿದೆ.
ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಕಾಮ್ತೆ ಹಾಗೂ ಚಿಪ್ಲುನ್‌ ನಿಲ್ದಾಣಗಳ ನಡುವೆ ಭಾರಿ ಮಳೆಯಿಂದ ತೊಂದರೆಗೊಳಗಾಗಿದ್ದ ರೈಲು ಮಾರ್ಗವನ್ನು ಸುಸ್ಥಿತಿಗೆ ತರಲಾಗಿದೆ ಎಂದು ಅಧಿಕಾರಿಗಳು ದೃಢೀಕರಿಸಿದ ನಂತರ ರೈಲುಗಳ ಸಂಚಾರವನ್ನು ಪುನರಾಂಭಿಸಲಾಗಿದೆ ಎಂದು ಕೊಂಕಣ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ಭಾರಿ ಮಳೆಯಿಂದಾಗಿ ಶುಕ್ರವಾರ ಮುಂಜಾನೆಯಿಂದ ವಸಿಷ್ಟ ನದಿ ಅಪಾಯದ ಮಟ್ಟ ತಲುಪಿ
ಕಾಮ್ತೆ ಹಾಗೂ ಚಿಪ್ಲುನ್‌ ನಡುವಣ ಮೇಲು ಸೇತುವೆಯ ಮೇಲೆ ಹರಿದ ಪರಿಣಾಮ ಮುಂಬೈ ಮಾರ್ಗದಲ್ಲಿ ಸಾಮಾನ್ಯ ರೈಲು ಸೇವೆಗಳಿಗೆ ತೊಂದರೆಯಾಗಿತ್ತು.
ನಂತರ ಚಿಪ್ಲುನ್‌ ಪಟ್ಟಣ ಪ್ರವಾಹದ ನೀರಿನಿಂದ ಆವೃತ್ತಗೊಂಡಿತ್ತು. ಪ್ರವಾಹ ಕಡಿಮೆಯಾದ ನಂತರ ಕೊಂಕಣ್‌ ರೈಲು ಅಧಿಕಾರಿಗಳು ರೈಲು ಮಾರ್ಗವನ್ನು ದುರಸ್ತಿಗೊಳಿಸಿದ ನಂತರ ರೈಲು ಸೇವೆ ಪುನಃ ಸ್ಥಾಪಿಸಲಾಗಿದೆ
ಮಾರ್ಗಗಳ ಹಳಿಗಳಲ್ಲಿ ಉಂಟಾದ ವ್ಯತ್ಯಯದಿಂದಾಗಿ ಶುಕ್ರವಾರದಿಂದ ಮಂಗಳೂರು -ಮುಂಬೈ ಹಾಗೂ ಕೇರಳ-ಮುಂಬೈ ಹಾಗೂ ಉತ್ತರದವರೆಗಿನ ಹಲವು ಮಾರ್ಗಗಳಲ್ಲಿ ರೈಲುಗಳನ್ನು ರದ್ದುಪಡಿಸಲಾಗಿತ್ತು ಇಲ್ಲವೇ ಪರ್ಯಾಯ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲಾಗುತ್ತಿತ್ತು.
ಯುಎನ್‌ ಐ ಕೆವಿಆರ್‌ 1515