Sunday, Oct 24 2021 | Time 02:20 Hrs(IST)
Entertainment Share

ಮೊದಲ ಮೊಬೈಲ್ ಥಿಯೇಟರ್ .. ಅಕ್ಷಯ್ ಗೆ ಗೌರವ!

ಮುಂಬೈ, ಆಗಸ್ಟ್‌ 30( ಯುಎನ್‌ ಐ) ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಲಡಾಖ್ ನಲ್ಲಿ ಆರಂಭಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು 11,562 ಅಡಿ ಎತ್ತರದಲ್ಲಿ, ಕಡಿಮೆ ವೆಚ್ಚದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಮೊಬೈಲ್ ಥಿಯೇಟರ್ ಅನ್ನು ನಿರ್ಮಿಸಲಾಗಿದೆ. ದೂರದ ಕುಗ್ರಾಮಗಳ ಜನರೂ ಸಹ ಸಿನಿಮಾಗಳಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಚಿತ್ರಮಂದಿರವನ್ನು ಸೇವೆಗೆ ಲಭ್ಯವಾಗಿಸಿರುವೆ ಎಂದು ಪಿಕ್ಚರ್‌ ಟೈಮ್‌ ಸ್ಥಾಪಕ, ಸಿಇಒ ಸುಶೀಲ್‌ ಹೇಳಿದ್ದಾರೆ. ಬಾಲಿವುಡ್‌ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ' ಬೆಲ್‌ ಬಾಟಮ್‌ ʼ ಚಿತ್ರವನ್ನು ಈ ಥಿಯೇಟರ್‌ ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈ ವಿಷಯವನ್ನು ಅಕ್ಷಯ್ ಕುಮಾರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಲಡಾಖ್‌ನ ಲೇಹ್‌ನಲ್ಲಿ ಸ್ಥಾಪಿಸಲಾಗಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ 'ಬೆಲ್ ಬಾಟಮ್' ಚಲನಚಿತ್ರವನ್ನು ಪ್ರದರ್ಶಿಸುವುದು ನನಗೆ ದೊರೆತ ಗೌರವ ಎಂದು ಭಾವಿಸಿದ್ದೇನೆ. ಇದರಿಂದ ನನ್ನ ಮನಸ್ಸು ಆನಂದಗೊಂಡಿದೆ "ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಚಿತ್ರ ಆಕ್ಷನ್ ಥ್ರಿಲ್ಲರ್ ಆಗಿದ್ದು ಇದನ್ನು ರಂಜಿತ್ ಎಂ. ತಿವಾರಿ ನಿರ್ದೇಶಿಸಿದ್ದಾರೆ. ವಾಣಿ ಕಪೂರ್, ಲಾರಾ ದತ್ತಾ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಹಲವಾರು ಬಾರಿ ವಿಳಂಬಗೊಂಡು, ನಂತರ ಬಿಡುಗಡೆಗೊಂಡ ಈ ಚಿತ್ರ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಯುಎನ್‌ ಐ ಕೆವಿಆರ್‌ 1609
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..