Monday, Sep 20 2021 | Time 07:48 Hrs(IST)
National Share

ಸ್ವಕ್ಷೇತ್ರ ವಾರಾಣಸಿಗೆ ಜುಲೈ 15ರಂದು ಪ್ರಧಾನಿ ಭೇಟಿ

ವಾರಾಣಸಿ, ಜುಲೈ 12(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 15 ರಂದು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಇದು ಕಳೆದ ಎಂಟು ತಿಂಗಳ ಬಳಿಕ ಮೋದಿಯವರ ವಾರಾಣಸಿ ಭೇಟಿಯಾಗಲಿದ್ದು, ಐದರಿಂದ ಆರು ಗಂಟೆಗಳ ಕಾಲ ಅಲ್ಲಿಯೇ ಇರಲಿದ್ದರೆ. ಈ ಸಂದರ್ಭದಲ್ಲಿ 1,550 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ನಗರಕ್ಕೆ ಅರ್ಪಿಸಲಿದ್ದು, 10 ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ವರ್ಚುವಲ್ ಮೂಲಕ ವಾರಾಣಸಿಯಿಂದ ರಾಜ್ಯದ ಒಂಬತ್ತು ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ಉದ್ಘಾಟಿಸುವ ನಿರೀಕ್ಷೆಯಿದೆ. ಇಡೀ ದಿನದ ಭೇಟಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ, ಸಂಪರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಗೆ ಭೇಟಿ ನೀಡುವ ಸಾಧ್ಯತೆಯಿದೆ.
ಪ್ರಧಾನಿಯವರು ಮೊದಲು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ನಂತರ ಸಂಪರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ತೆರಳಲಿದ್ದಾರೆ. ಜಪಾನ್‌ನ ಸಹಾಯದಿಂದ ನಿರ್ಮಿಸಲಾಗಿರುವ ಸಿಗ್ರಾದಲ್ಲಿ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಅನ್ನು ಅವರು ಉದ್ಘಾಟಿಸುವ ನಿರೀಕ್ಷೆಯಿದೆ. ಪ್ರಧಾನಿ ನಗರಕ್ಕೆ ಭೇಟಿ ನೀಡಿದಾಗ ಜಪಾನ್ ರಾಯಭಾರಿ ಕೂಡ ಹಾಜರಾಗುವ ನಿರೀಕ್ಷೆಯಿದೆ. ಸಂಪೂರ್ಣ ಕಾರ್ಯಕ್ರಮದ ಸಮಯದಲ್ಲಿ, ಬಿಗಿಯಾದ ಭದ್ರತಾ ವ್ಯಾಪ್ತಿಯ ನಡುವೆ ಕಟ್ಟುನಿಟ್ಟಾದ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲಾಗುತ್ತದೆ.
ಪ್ರಧಾನಿ ಭೇಟಿಗೂ ಮುನ್ನ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ ಮತ್ತು ಡಿಜಿಪಿ ಮುಕುಲ್ ಗೋಯಲ್ ಅವರು ಕಾಶಿ ವಿಶ್ವನಾಥ ದೇವಸ್ಥಾನ, ಸಂಪರ್ಣಾನಂದ್ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಸೇರಿದಂತೆ ಪ್ರಧಾನಿ ಕಾರ್ಯಕ್ರಮಗಳ ಉದ್ದೇಶಿತ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ್ದಾರೆ.
ಯುಎನ್ಐ ಎಸ್ಎ 1404