Friday, Oct 22 2021 | Time 04:46 Hrs(IST)
Special Share

ಗುಜರಾತ್, ಇಂದು ಹೊಸ ನಾಯಕನ ಆಯ್ಕೆ

ಅಹಮದಾಬಾದ್, ಸೆ 12 (ಯುಎನ್ಐ) ನಾಟಕೀಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದು, ಇಂದು ಹೊಸ ನಾಯಕನ ಆಯ್ಕೆ ನಡೆಯಲಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪೈಕಿ ಒಬ್ಬರಿಗೆ ಸಿಎಂ ಹುದ್ದೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಪ್ರಹ್ಲಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಇಂದು ಗುಜರಾತ್ಗೆ ಹೊಸ ಸಿಎಂ ಆಯ್ಕೆ ಗಾಗಿ ಇಲ್ಲಿಗೆ ಆಗಮಿಸಿದ್ದಾರೆ. ಪಕ್ಷದ ತಳಮಟ್ಟದಲ್ಲಿ ವಿಜಯ ರೂಪಾನಿ ಅವರ ಬಗ್ಗೆ ತುಂಬಾ ಅಸಮಾಧಾನ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರನ್ನು ಹಠಾತ್ತನೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಹೇಳಲಾಗಿದೆ.

ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ರುಪಾನಿ ಅವರನ್ನು ಹುದ್ದೆಯಲ್ಲಿ ಮುಂದುವರೆಯಲು ಬಿಟ್ಟರೆ ಪಕ್ಷದಲ್ಲಿ ಅಸಮಧಾನ, ಆಕ್ರೋಶ ಮತ್ತು ಗುಂಪುಗಾರಿಕೆ ಹೆಚ್ಚಾಗಿ,ಬಿಜೆಪಿ ಭವಿಷ್ಯ ಮತ್ತಷ್ಟು ಮಸುಕಾಗಲಿದೆ ಎಂಬುದನ್ನು ಅರಿತ ನಾಯಕರು ಹುದ್ದೆ ತೊರೆಯುವಂತೆ ಸೂಚನೆ ನೀಡಿದ್ದು ವಿಜಯ ರೂಪಾನಿ ತಮ್ಮಸ್ಥಾನಕ್ಕೆನೀಡಿದ್ದು ಇಂದು ಬಹುತೇಕ ಹೊಸ ನಾಯಕ ನಾಯಕ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಯುಎನ್ಐ ಕೆಎಸ್ಆರ್ 0913
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..