Monday, Sep 20 2021 | Time 07:29 Hrs(IST)
Sports Share

ಭಾರತ ಗೆಲುವಿಗೆ 220 ರನ್ ಗುರಿ ನೀಡಿದ ಇಂಗ್ಲೆಂಡ್

ಭಾರತ ಗೆಲುವಿಗೆ 220 ರನ್ ಗುರಿ ನೀಡಿದ ಇಂಗ್ಲೆಂಡ್
ಭಾರತ ಗೆಲುವಿಗೆ 220 ರನ್ ಗುರಿ ನೀಡಿದ ಇಂಗ್ಲೆಂಡ್

ವೂಸ್ಟರ್, ಜು.3 (ಯುಎನ್ಐ)- ಭರವಸೆಯ ಬೌಲರ್ ಗಳಾದ ದೀಪ್ತಿ ಶರ್ಮಾ (47ಕ್ಕೆ 3) ಇವರ ಉತ್ತಮ ದಾಳಿಯ ನೆರವಿನಿಂದ ಭಾರತ ವನಿತೆಯರ ತಂಡ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 219 ರನ್ ಗಳಿಗೆ ಕಟ್ಟಿ ಹಾಕಿದೆ.

ಇಂಗ್ಲೆಂಡ್ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ ಗೆ ಆರಂಭಿಕ ಲಾರೆನ್ ವಿನ್ಫೀಲ್ಡ್-ಹಿಲ್ ಹಾಗೂ ಹೀದರ್ ನೈಟ್ ಜೋಡಿ 91 ಎಸೆತಗಳಲ್ಲಿ 67 ರನ್ ಸೇರಿಸಿ ಅಬ್ಬರಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ನೇಹ ರಾಣಾ ಸಫಲರಾದರು. ಮೂರನೇ ವಿಕೆಟ್ ಗೆ ಹೀದರ್ ನೈಟ್ ಹಾಗೂ ನಾಟ್ ಸ್ಕೀವರ್ ಜೋಡಿ 42 ರನ್ ಸೇರಿಸಿತು. ನಾಯಕಿ ನೈಟ್ 46 ರನ್ ಗಳಿಸಿದ್ದಾಗ ಕೌರ್ ಎಸೆತದಲ್ಲಿ ಔಟ್ ಆದರು.

ಸ್ಕೀವರ್ ಹಾಗೂ ಆಮಿ ಜೋನ್ಸ್ (17) ಜೋಡಿ 41 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿತು. ಸ್ಕೀವರ್ 59 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 49 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಸೋಫಿಯಾ ಡಂಕ್ಲೆ 28 ರನ್ ಸೇರಿಸಿದರು. ಅಂತಿಮವಾಗಿ ಇಂಗ್ಲೆಂಡ್ 47 ಓವರ್ ಗಳಲ್ಲಿ 219 ರನ್ ಗಳಿಗೆ ಸರ್ವಪತನ ಕಂಡಿತು.

ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಜುಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂನಮ್ ಯಾದವ್, ಸ್ನೇಹ ರಾಣಾ, ಹರ್ಮನ್ ಪ್ರೀತ್ ಕೌರ್ ತಲಾ ಒಂದು ವಿಕೆಟ್ ಪಡೆದರು.

ಯುಎನ್ಐ ವಿಎನ್ಎಲ್ 2124