Thursday, Dec 9 2021 | Time 00:10 Hrs(IST)
Sports Share

ಅಂಡರ್ 19 ಮಹಿಳಾ ಏಕದಿನ ಕ್ರಿಕೆಟ್ : ಕರ್ನಾಟಕಕ್ಕೆ ಸೋಲು

ಜೈಪುರ್, ಸೆ.29 (ಯುಎನ್ಐ)- ಕರ್ನಾಟಕ ರಾಜ್ಯ ವನಿತೆಯರ ತಂಡ, ಪಂಜಾಬ್ ವಿರುದ್ಧ ಅಂಡರ್ 19 ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಪಂಜಾಬ್ 50 ಓವರ್ ಗಳಲ್ಲಿ 8 ವಿಕೆಟ್ ಗೆ 168 ರನ್ ಸೇರಿಸಿತು. ಪಂಜಾಬ್ ಪರ ಪ್ರಗತಿ ಸಿಂಗ್ 99 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 65 ರನ್ ಸಿಡಿಸಿದರು. ಉಳಿದಂತೆ ಐಶ್ಮಿನ್ ಕೌರ್ 28, ಮನ್ನತ್ ಕಶ್ಯಪ್ 20 ರನ್ ಬಾರಿಸಿದರು. ಕರ್ನಾಟಕದ ಪರ ಮಿಥಾಲಿ ವಿನೋದ್, ಪೂಜಾ ಕುಮಾರಿ ತಲಾ ಎರಡು ವಿಕೆಟ್ ಕಬಳಿಸಿದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 49 ಓವರ್ ಗಳಲ್ಲಿ 146 ರನ್ ಗಳಿಗೆ ಆಲೌಟ್ ಆಯಿತು. ಛಂದಸಿ ಕೃಷ್ಣಮೂರ್ತಿ 66 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 52 ರನ್ ಕಲೆ ಹಾಕಿದರು. ಪಂಜಾಬ್ ಪರ ಮುಸ್ಕಾನ್ ಸೋಗಿ ಹಾಗೂ ಮನ್ನತ್ ತಲಾ ಮೂರು ವಿಕೆಟ್ ಕಬಳಿಸಿದರು.

ಯುಎನ್ಐ ವಿಎನ್ಎಲ್ 2023