Wednesday, Oct 20 2021 | Time 16:33 Hrs(IST)
Karnataka Share

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ: ಬಿ.ಸಿ.ಪಾಟೀಲ್

ಬೆಂಗಳೂರು, ಸೆ.15 (ಯುಎನ್ಐ) ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಧಾನಸಭೆಗೆ ಬುಧವಾರ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಡಾ.ಅಜಯ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಲೆಯಲ್ಲೇ ರಾಜ್ಯದಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಡಿಎಪಿ ಗೊಬ್ಬರವನ್ನು ಶೇ.148ರಷ್ಟು ಕಡಿಮೆ ಮಾಡಿ 1200 ರೂಪಾಯಿಗೆ ರೈತರಿಗೆ ಮಾರಾಟ ಮಾಡುತ್ತಿದೆ. ನಮ್ಮ ರಾಜ್ಯದಲ್ಲೂ ಅದೇ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ ಎಂದರು.
ಈವರೆಗೆ 659 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇತಿಹಾಸದಲ್ಲೇ ಗೊಬ್ಬರ ಮಾರಾಟಗಾರರ ವಿರುದ್ಧ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣ ದಾಖಲು ಮಾಡಿದೆ ನಿರ್ದರ್ಶನ ಇಲ್ಲ ಎಂದರು.
ರಸಗೊಬ್ಬರದ ಕೊರತೆ ಇಲ್ಲ ರಾಜ್ಯದ ಯಾವುದೇ ಪ್ರದೇಶದಲ್ಲಿ ರಸಗೊಬ್ಬರದ ಸಮಸ್ಯೆ ಅಥವಾ ಕೊರತೆ ಇದೆ ಎಂದು ತಿಳಿಸಿದರೆ ತಕ್ಷಣ ಅಗತ್ಯವಿರುವಷ್ಟು ಗೊಬ್ಬರವನ್ನು ಪೂರೈಸಲಾಗುವುದು ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಅಜಯ್ ಸಿಂಗ್ ಮತ್ತು ನಾಡಗೌಡ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ದೊರಕುತ್ತಿಲ್ಲ. ಹಲವು ಕಡೆ ಕಾಂಪ್ಲೆಕ್ಸ್ ಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ಅದು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ರೈತರು ಕೊಂಡು ಕೊಳ್ಳುವ ಶಕ್ತಿ ಇಲ್ಲದೇ ಪರದಾಡುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಯುಎನ್ಐ ಕೆಎಸ್ ಆರ್ ಪಿಕೆ
More News
ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 2:57 PM

ಬೆಂಗಳೂರು,ಅ.

 Sharesee more..
ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

20 Oct 2021 | 2:56 PM

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು.

 Sharesee more..
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

20 Oct 2021 | 2:53 PM

ಬೆಂಗಳೂರು,ಅ.

 Sharesee more..
ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 2:52 PM

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.

 Sharesee more..