Sunday, Oct 24 2021 | Time 01:47 Hrs(IST)
Entertainment Share

ಶೀಘ್ರದಲ್ಲೇ "ಡಿಯರ್ ಸತ್ಯ" ಆಗಮನ

ಶೀಘ್ರದಲ್ಲೇ
ಬೆಂಗಳೂರು, ಆಗಸ್ಟ್ 30(ಯುಎನ್ಐ) ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ "ಡಿಯರ್ ಸತ್ಯ" ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಈ ನಡುವೆ ಆರ್ಯನ್ ಜನ್ಮದಿನದಂದು ಚಿತ್ರತಂಡ ಟ್ರೇಲರ್ ಬಿಡುಗಡೆಗೊಳಿಸಿದೆ.

ಟ್ರೇಲರ್ ಅನ್ನು ಡೆಲಿವರಿ ರಿ ಬಾಯ್ಸ್ ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಯನ್, ನಾನು ಚಿತ್ರರಂಗಕ್ಕೆ ಬಂದು ಹತ್ತುವರ್ಷವಾಗಿದೆ. ಕಲ್ಲರಳಿ ಹೂವಾಗಿ ಮೂಲಕ ಪೋಷಕ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿ, ನೂರುಜನ್ಮಕ್ಕು ಚಿತ್ರದಿಂದ ನಾಯಕನಾದೆ ಎಂದರು.

"ಡಿಯರ್ ಸತ್ಯ" ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರೂ ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಬಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದು ಹೇಳಿದರು.

ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ ಭಿನ್ನ ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಓಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ "ಡಿಯರ್ ಸತ್ಯ" ನಿರ್ಮಾಣ ಮಾಡಿದ್ದೇವೆ.‌ ಆರ್ಯನ್ ಸಂತೋಷ್ ನನ್ನ ಸ್ನೇಹಿತ. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಸೆಪ್ಟೆಂಬರ್ ನಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳುತ್ತಿದ್ದೇವೆ ಎಂದವರು ನಿರ್ಮಾಪಕ ಗಣೇಶ್ ಪಾಪಣ್ಣ.
ಮತ್ತೊಬ್ಬ ನಿರ್ಮಾಪಕ ಶ್ರೀನಿವಾಸ ಶ್ರೀಭಕ್ತ ಕೂಡ ಸಿನಿಮಾ ನಿರ್ಮಾಣದ ಬಗ್ಗೆ ಮಾಹಿತಿ ‌ನೀಡಿದರು.


ನಿರ್ದೇಶಕ ಶಿವಗಣೇಶ್, ಜಿಗರ್ ಥಂಡ, ತ್ರಾಟಕ, ಆ ದೃಶ್ಯ ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ಕೊಂಡೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಚಿತ್ರ ಆರಂಭ ವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯವೂ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ‌ ತಂತ್ರಜ್ಞರು ಹಾಗೂ ಕಲಾವಿದರಿಗೆ ನನ್ನ ಧನ್ಯವಾದ ಎಂದರು

ಆಡಿಷನ್ ಮೂಲಕ ಆಯ್ಕೆಯಾದ ನಾಯಕಿ ಅರ್ಚನಾ ಕೊಟ್ಟಿಗೆ, ಕಲಾವಿದರಾದ ಬಾಲು, ಕಾರ್ತಿಕ್ ಸುಬ್ರಹ್ಮಣ್ಯ, ಫ್ಯಾಷನ್ ಡೈರೆಕ್ಟರ್ ಭಾರ್ಗವಿ ವಿಖ್ಯಾತಿ ಹಾಗೂ ಸಾಹಸ ನಿರ್ದೇಶಕ ಕುಂಗ್ಫು ಚಂದ್ರು ಮಾಧ್ಯಮದ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಯುಎನ್ಐ ಎಸ್ಎ 1101
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..