Sunday, Oct 24 2021 | Time 02:24 Hrs(IST)
International Share

ಪಾಕ್ ಐಎಸ್ಐ ಮುಖ್ಯಸ್ಥ-ತಾಲಿಬಾನ್ ಮುಖಂಡರ ಭೇಟಿ

ಕಾಬೂಲ್, ಸೆಪ್ಟೆಂಬರ್ 4 (ಯುಎನ್ಐ) ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೂ ಮುನ್ನ ಪಾಕಿಸ್ತಾನದ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಕಾಬೂಲ್ ಗೆ ಆಗಮಿಸಿದ್ದಾರೆ.
ತಾಲಿಬಾನ್ ಕೌನ್ಸಿಲ್ ಆಹ್ವಾನದ ಮೇರೆಗೆ ಅವರು ಕಾಬೂಲ್ ಗೆ ಆಗಮಿಸಿದ್ದು, ಮುಲ್ಲಾ ಅಬ್ದುಲ್ ಘನಿ ಬರದಾರ್ ಸೇರಿದಂತೆ ಉನ್ನತ ತಾಲಿಬಾನ್ ನಾಯಕರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ.
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಮುಖ್ಯಸ್ಥರು ಹಿರಿಯ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ಹಮೀದ್ ವಹಿಸುತ್ತಿದ್ದಾರೆ.
ತಾಲಿಬಾನ್‌ಗಳು ತಮ್ಮ ಸರ್ಕಾರವನ್ನು ರಚಿಸುವುದಾಗಿ ಘೋಷಿಸುವುದಕ್ಕಿಂತ ಮುಂಚೆಯೇ ಕಾಬೂಲ್‌ಗೆ ಅವರು ಆಗಮಿಸಿದ್ದು, ಸೆರೆನಾ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದೊಂದಿಗಿನ ತಾಲಿಬಾನ್ ನಿಕಟ ಸಂಪರ್ಕದ ಕುರಿತು ಇತ್ತೀಚೆಗೆ, ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್, ಸಂದರ್ಶನವೊಂದರಲ್ಲಿ ಪ್ರಸ್ತಾಪಿಸಿದ್ದರು. ಪಾಕಿಸ್ತಾನವು ತಾಲಿಬಾನ್ ಅನ್ನು ದೀರ್ಘಕಾಲದಿಂದ ನೋಡಿಕೊಳ್ಳುತ್ತಿದೆ. ತಾಲಿಬಾನ್ ನ ಪ್ರಮುಖ ಮುಖಂಡರು ಪಾಕಿಸ್ತಾನದಲ್ಲೇ ಜನಿಸಿದವರು ಎಂದು ಹೇಳಿದ್ದರು.
"ನಾವು ತಾಲಿಬಾನ್ ನಾಯಕರ ಪಾಲಕರು. ಬಹುತೇಕ ತಾಲಿಬಾನ್ ಗಳು ಪಾಕಿಸ್ತಾನದಲ್ಲೇ ಶಿಕ್ಷಣ ಪಡೆದಿದ್ದಾರೆ. ಮನೆಗಳನ್ನು ಹೊಂದಿದ್ದಾರೆ” ಎಂದು ರಶೀದ್ ಹಮ್ ನ್ಯೂಸ್‌ಗೆ ತಿಳಿಸಿದ್ದರು.
ತಾಲಿಬಾನ್ ಜೊತೆಗಿನ ಸಂಬಂಧವನ್ನು ನೇರವಾಗಿ ಎತ್ತಿ ತೋರಿಸುವ ಹೇಳಿಕೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಈ ವಾರದ ಆರಂಭದಲ್ಲಿ ಅಫ್ಘಾನಿಸ್ತಾನವನ್ನು ಕೈಬಿಡಬಾರದು ಏಕೆಂದರೆ ಅದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. "ಇಂತಹ ಕ್ರಮವು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಯಾರೂ ತಪ್ಪಿಸಿಕೊಳ್ಳುವುದಿಲ್ಲ" ಎಂದಿದ್ದರು.
ಯುಎನ್ಐ ಎಸ್ಎ 1502
More News
ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

23 Oct 2021 | 12:27 PM

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಸರಣಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಸ್ಲಾಮಿಸ್ಟ್ ಹಾಗೂ ಭದ್ರತಾ ಪಡೆಗಳ ಮಧ್ಯೆ ನಡದೆ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಇಸ್ಲಾಮಿಸ್ಟ್ ಹೋರಾಟಗಾರರು ಅಸುನೀಗಿದ್ದಾರೆ.

 Sharesee more..
ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

22 Oct 2021 | 7:50 PM

ಮುಂಬೈ: ಅ, 22 (ಯುಎನ್‌ಐ) ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

 Sharesee more..
ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ  !

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ !

22 Oct 2021 | 4:50 PM

ವಾಷಿಂಗ್ಟನ್ : ಅ, 22 (ಯುಎನ್‌ಐ) ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ.

 Sharesee more..
ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

22 Oct 2021 | 3:23 PM

ಢಾಕಾ,ಅ.

 Sharesee more..
ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

22 Oct 2021 | 3:22 PM

ಅಮೆರಿಕಾ,ಅ.

 Sharesee more..