Wednesday, Oct 20 2021 | Time 16:20 Hrs(IST)
Special Share

ಹಿಂದುಗಳಲ್ಲಿ ಅ ಸಂಖ್ಯೆಗೆ ಏಕೆ ಅಷ್ಟೊಂದು ಮಹತ್ವ

ಮುಂಬೈ, ಸೆ 11(ಯುಎನ್‌ ಐ) ಹಿಂದೂಗಳು ಆ ಸಂಖ್ಯೆಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಯಾವ ಕೆಲಸ ಮಾಡಿದರೂ ಇದರೊಂದಿಗೆ ಜೋಡಿಸಲಾಗುತ್ತದೆ. ನಿಜಕ್ಕೂ ಆ ಸಂಖ್ಯೆಗೆ ಅಷ್ಟೊಂದು ಮಹತ್ವ ಏಕೆ? ಇದರ ಹಿಂದೆ ದೊಡ್ಡ ಕಥೆಯಿದೆ. ಅಷ್ಟಕ್ಕೂ ಆ ಸಂಖ್ಯೆ ಯಾವುದು .. ವಿವರಗಳನ್ನು ತಿಳಿದುಕೊಳ್ಳೋಣ. ಈ ಸಂಖ್ಯೆಯ ಹಿಂದೆ ಬಾಹ್ಯಾಕಾಶ ವಿಜ್ಞಾನವಿದೆ. ವೇದ ಕಾಲದಲ್ಲಿ ಅದೆಷ್ಟೋ ಸಂಶೋಧನೆಗಳು ನಡೆದಿವೆ.
ಈ ಸಂಖ್ಯೆಯನ್ನು ಆಧರಿಸಿ, ಭೂಮಿ - ಸೂರ್ಯನ ನಡುವಿನ ಅಂತರವನ್ನು ಸಹ ಆಗಲೇ ಲೆಕ್ಕಹಾಕಿದ್ದಾರೆ. ಅದು ನೂರಾ ಎಂಟು. ಸೂರ್ಯನ ವ್ಯಾಸ ಭೂಮಿಯ ವ್ಯಾಸದ 108 ಪಟ್ಟು ಹೆಚ್ಚು. .. ಎಲ್ಲಾ ಲೆಕ್ಕಾಚಾರಗಳು, ದೂರಗಳು ಈ ಸಂಖ್ಯೆಗೆ ಸಂಬಂಧಿಸಿವೆ. ವೇದ ಕಾಲದಲ್ಲಿ ನಮ್ಮ ಋಷಿಗಳು ಹೇಳಿದ್ದು ನಿಜ.
ಆಯುರ್ವೇದದ ಪ್ರಕಾರ, ಮಾನವ ದೇಹದಲ್ಲಿ ನೂರೆಂಟು ಮರ್ಮಸ್ಥಾನಗಳಿವೆ. ಶ್ರೀ ಚಕ್ರದ ಅರ್ಥವೂ ಗೊತ್ತಿಲ್ಲ. ಈ ಚಕ್ರದಲ್ಲಿ 54 ಪುರುಷ, 54 ಸ್ತ್ರೀ ಆಂತರಿಕ ಅಂಗಗಳನ್ನು ಒಳಗೊಂಡಿದೆ. ಇದು ಒಟ್ಟು 108. ಶ್ರೀ ಚಕ್ರವು ಮನೆಯಲ್ಲಿದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸುತ್ತದೆ ಎಂದು ನಂಬಲಾಗಿದೆ. ಕೆಲವರು ಇದನ್ನು ಮೂಢನಂಬಿಕೆ ಎಂದು ಹೇಳುವುದು ಉಂಟು
ಆದರೆ, ನಾವು ಹುಟ್ಟಿದಾಗ ಯಾವ ರಾಶಿ ಅಥವಾ ನಕ್ಷತ್ರ ಆಧಾರದ ಮೇಲೆ ಭೂಮಿಯ ಮೇಲೆ ಬೀಳುತ್ತೇವೋ ಅವು ಕೊನೆಯವರೆಗೂ ನಮ್ಮ ಮೇಲೆ ಪರಿಣಾಮ ಬೀರುತ್ತವೆ. 27 ನಕ್ಷತ್ರಗಳನ್ನು 4 ಪಾದಗಳಿಂದ ಗುಣಿಸಿದರೆ 108 ಬರುತ್ತದೆ. ಭಾರತೀಯ ವಿಜ್ಞಾನದ ಪ್ರಕಾರ 12 ನಕ್ಷತ್ರ ಪುಂಜಗಳು 9 ಗ್ರಹಗಳನ್ನು ಒಳಗೊಂಡಿರುತ್ತವೆ. ಈ ಎರಡನ್ನು ಗುಣಿಸಿದರೆ 108 ಬರುತ್ತದೆ. ಮನುಷ್ಯ ಸರಾಸರಿ 21,600 ಬಾರಿ ಉಸಿರಾಡುತ್ತಾನೆ. ಅದರಲ್ಲಿ 10,800 ಬಾರಿ ಸೂರ್ಯಾಂಶ ಎಂದರೆ ಜೀವ ಶಕ್ತಿ, 10,800 ಸಾರಿ ಚಂದ್ರಾಂಶ ಎಂದರೆ ನಾವು ಹೊರ ಸೂಸುವ ಕಾರ್ಬನ್ ಡೈ ಆಕ್ಸೈಡ್. ಆಮ್ಲಜನಕದ ಹೀರಿಕೊಳ್ಳುವಿಕೆ, ಕಾರ್ಬನ್ ಡೈಆಕ್ಸೈಡ್ ಬಿಡುಗಡೆ.
ನಟರಾಜನ ನೃತ್ಯದ ಭಂಗಿಗಳು ಕೂಡ 108. ಅಷ್ಟಾದಶ ಪುರಾಣಗಳು ಕೂಡ 108. ಅದಕ್ಕಾಗಿಯೇ ನಮ್ಮ ಪ್ರಾಚೀನ ಋಷಿಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ನೀವು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರೂ, ಶ್ಲೋಕಗಳನ್ನು ಓದಿದರೂ 108 ಬಾರಿ ಮಾಡುತ್ತಾರೆ. ನಮ್ಮೊಳಗಿನ ದೇವರನ್ನು ಭೇಟಿಯಾಗಲು ನಾವು 108 ಮೆಟ್ಟಲು ದಾಟಿ ಹೋಗಬೇಕು ಎಂಬುದು ಬೌದ್ಧರ ನಂಬಿಕೆಯಾಗಿದೆ.
ಇದು ಭಾರತೀಯ ಅದ್ಭುತ ಗಣಿತ ಜ್ಞಾನದ ಸಂಕೇತವಾಗಿದೆ. ಸಾವಿರಾರು ವರ್ಷಗಳ ಹಿಂದೆ ಅನೇಕ ಸಂಶೋಧನೆ ನಡೆಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ರುದ್ರಾಕ್ಷಿ, ತುಳಸಿ ದಳ ಎಲ್ಲವೂ ನೂರಾ ಎಂಟಕ್ಕೆ ಸಂಬಂಧಿಸಿವೆ. ಅತ್ಯಂತ ಮಹತ್ವದ ಈ ಸಂಖ್ಯೆಯ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿವೆ.
ಯುಎನ್‌ ಐ ಕೆವಿಆರ್‌ 1813