Wednesday, Oct 20 2021 | Time 15:27 Hrs(IST)
Karnataka Share

ಮೇಲ್ಮನೆ ಕಲಾಪ ಮುಂದೂಡಿಕೆ

ಬೆಂಗಳೂರು,ಸೆ.13(ಯುಎನ್ಐ) ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನದ ಮೊದಲ ದಿನ ಮೇಲ್ಮನೆ ಸದನದಲ್ಲಿ ಇತ್ತೀಚೆಗೆ ಅಗಲಿದ ಜನಪ್ರತಿನಿಧಿಗಳು, ಕಲಾವಿದರು ಮತ್ತಿತ್ತರರಿಗೆ ಸಂತಾಪ ಸೂಚಿಸುವ ಮೂಲಕ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.

ವಿಧಾನ ಪರಿಷತ್ತಿನ ಮೊದಲ ದಿನದ ಕಲಾಪದಲ್ಲಿ ಬೆರಳೇಣಿಕೆಯಷ್ಟು ಮಾತ್ರ ಸದಸ್ಯರು ಹಾಜರಿರುವುದ ಕಂಡು ಬಂದಿತು. ಆರಂಭದಲ್ಲಿ 15 ಜನ ಆಡಳಿತ ಬಿಜೆಪಿ ಪಕ್ಷದ ಸದಸ್ಯರು ಹಾಜರು, 6 ಜನ ವಿಪಕ್ಷ ಕಾಂಗ್ರೆಸ್ ಸದಸ್ಯರು ಹಾಗೂ ಕೇವಲ ಇಬ್ಬರು ಜೆಡಿಎಸ್ ಸದಸ್ಯರು ಮಾತ್ರ ಕಲಾಪದಲ್ಲಿ ಭಾಗಿಯಾಗಿದ್ದು ಎದ್ದು ಕಂಡಿತು.

ಮೇಲ್ಮನೆ ಸದನ ಸೇರುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆಯನ್ನು ಕೈಗೆತ್ತಿಕೊಂಡರು.ಮಾಜಿ ಶಾಸಕರಾದ ಕೆ.ಬಿ ಶಾಣಪ್ಪ,ಡಾ‌. ಮುಮ್ತಾಜ್ ಅಲಿ ಖಾನ್.ಕವಿ ಸಿದ್ದಲಿಂಗಯ್ಯ,ಎಸ್.ಎಂ. ಆನಂದ್, ಸಿಎಂ ಉದಾಸಿ,ಕೃಷ್ಣ,ಜಿ.ಮಾದೇಗೌಡ ಬಸಪ್ಪ ಸಿದ್ನಾಳ್,ಎಂ.ರಾಜಗೋಪಾಲ್, ಬಾಬಾಗೌಡ ರುದ್ರಗೌಡ ಪಾಟೀಲ್.ಅಬ್ದುಲ್ ಸಮದ್,ಪ್ರೊ. ವೆಂಕಟಸುಬ್ಬಯ್ಯ,ಕವಿ ಶಿವಶಂಕರ್, ಷಣ್ಮುಖಪ್ಪ ಕಾಶಪ್ಪ ಯರಕರ, ನಟ ಅರವಿಂದ್ ಕಲಾವಿದೆ ಕನಕಮೂರ್ತಿ,ವಿದ್ವಾಂಸ ಡಾ.ಲಿಕ್ಷ್ಮೀತಾತಾಚಾರ್, ಭಾನುಮತಿ,ಡಾ.ಅಶೋಕ ರಾಮಣ್ಣ ಸೊನ್ನದ್,ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ, ಪ್ರೊ. ವಸಂತ ಕುಷ್ಟಗಿ, ಎಂ.ಐ ಸವದತ್ತಿಹಿರಿಯ ನಟಿ ಜಯಂತಿ, ಲೇಖಕಿ ಗಿರಿಜಮ್ಮ ಸೇರಿದಂತೆ 24 ಜನ ಗಣ್ಯರಿಗೆ ಪಕ್ಷಾತೀತವಾಗಿ ಸಂತಾಪ ಸೂಚಿಸಿ ಅಗಲಿದ ಗಣ್ಯರ ಸೇವೆಯನ್ನು ಸದನದಲ್ಲಿ ಸ್ಮರಿಸಲಾಯಿತು.

ಈ ಮಧ್ಯೆ ಸಂತಾಪ ಸೂಚನೆ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ,ಸದನದಲ್ಲಿ ಮೃತಪಟ್ಟವರಿಗೆ ಕೇವಲ ಸಂತಾಪ ಸೂಚಿಸಿದರಷ್ಟೇ ಸಾಲದು.ಮೃತಪಟ್ಟ ಕಲಾವಿದರು ತಜ್ಞರು ಸೇರಿದಂತೆ ಎಲ್ಲರಿಗೂ ಮಾಸಾಶನ ನೀಡಬೇಕೆಂದು ಒತ್ತಾಯಿಸಿದರು. ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.

ಯುಎನ್ಐ ಯುಎಲ್, 1210
More News
ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 2:57 PM

ಬೆಂಗಳೂರು,ಅ.

 Sharesee more..
ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

20 Oct 2021 | 2:56 PM

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು.

 Sharesee more..
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

20 Oct 2021 | 2:53 PM

ಬೆಂಗಳೂರು,ಅ.

 Sharesee more..
ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 2:52 PM

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.

 Sharesee more..