Friday, Oct 22 2021 | Time 06:01 Hrs(IST)
Special Share

ಸಿಧು ಒಬ್ಬ ಅಸಮರ್ಥ ; ಕ್ಯಾಪ್ಟನ್‌ ಅಮರಿಂದರ್‌ ಆಕ್ರೋಶ

ಚಂಡೀಗಢ, ಸೆ 18(ಯುಎನ್‌ ಐ) ನವಜೋತ್ ಸಿಂಗ್ ಸಿಧು ಓರ್ವ ಅಸಮರ್ಥ ವ್ಯಕ್ತಿ. ತಮ್ಮ ಸಂಪುಟದಲ್ಲಿ ಸಚಿವನಾಗಿ ಒಂದು ಇಲಾಖೆಯನ್ನೇ ಸೂಕ್ತವಾಗಿ ನಿರ್ವಹಿಸಲು ಆಗದ ಅಸಮರ್ಥ. ಸಚಿವರಾಗಿದ್ದ ಏಳು ತಿಂಗಳಿನ ಅವಧಿಯಲ್ಲಿ ಆತ ಒಂದೇ ಒಂದು ಖಡತವನ್ನೂ ವಿಲೇವಾರಿ ಮಾಡಿರಲಿಲ್ಲ ಎಂದು ನಿರ್ಗಮಿತ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಆಕ್ರೋಶ ಹೊರ ಹಾಕಿದ್ದಾರೆ.
ರಾಜಭವನಕ್ಕೆ ತರಳಿ ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು .. ನಾನು ಮೂರು ಬಾರಿ ಅಪಮಾನಕ್ಕೊಳಗಾಗಿದ್ದೇನೆ .' ಅವರು ನಂಬುವವರನ್ನು ಮುಖ್ಯಮಂತ್ರಿಯಾಗಿಸಲು ಕಾಂಗ್ರೆಸ್ ವರಿಷ್ಟರು ಮುಕ್ತವಾಗಿದ್ದಾರೆ. ಸೂಕ್ತ ಕಾಲದಲ್ಲಿ ನನ್ನ ಮುಂದಿನ ನಿಲುವು ಏನು ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಿಧು ಸ್ನೇಹಿತ. ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್‌ ಖುಮರ್ ಜಾವೆದ್ ಜೊತೆಗೂ ಆತ ಉತ್ತಮ ಸಂಬಂಧ ಹೊಂದಿದ್ದು, ದೇಶದ ಹಿತದೃಷ್ಠಿಯಿಂದ ಆತನ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ವಿರೋಧಿಸುತ್ತೇನೆ ಎಂದು ನುಡಿದರು.
ಕಾಂಗ್ರೆಸ್‌ ನಲ್ಲಿ ಮುಂದುವರಿಯುವ ಅಥವಾ ತ್ಯಜಿಸುವ ಯಾವುದೇ ಬಗ್ಗೆ ಈಗ ಯಾವುದೇ ಉತ್ತರ ನೀಡುವುದಿಲ್ಲ ಎಂದು ಸಿಂಗ್‌ ಹೇಳಿದರು.
ಯುಎನ್‌ ಐ ಕೆವಿಆರ್‌ 2058
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..