Monday, Sep 20 2021 | Time 06:57 Hrs(IST)
National Share

ವಿಳಂಬದ ನಂತರ ದೆಹಲಿ ತಲುಪಿದ ಮುಂಗಾರು

ನವದೆಹಲಿ, ಜುಲೈ 13 (ಯುಎನ್‌ಐ) ನೈಋತ್ಯ ಮುಂಗಾರು ಮಂಗಳವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದು, ಉಷ್ಣಾಂಶವನ್ನು ತಗ್ಗಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯು 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಿಂದ ತತ್ತರಿಸಿತ್ತು. ನಗರದ ಪಕ್ಕದ ಪ್ರದೇಶಗಳಾದ ಗುರಗಾಂವ್ ಮತ್ತು ಫರಿದಾಬಾದ್‌ನಲ್ಲೂ ಮಳೆಯಾಗಿದೆ. ದೆಹಲಿ, ಎನ್‌ಸಿಆರ್ ಬಹದ್ದೂರ್‌ಗಡ, ಗುರುಗ್ರಾಮ್, ಮಾನೇಸರ್, ಫರಿದಾಬಾದ್, ಲೋನಿ ಡೆಹತ್, ಹಿಂಡನ್ ಎಎಫ್ ಸ್ಟೇಷನ್, ಘಜಿಯಾಬಾದ್ , ನೋಯ್ಡಾದಲ್ಲೂ ಮಳೆ ಸುರಿದಿದೆ'' ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.
ದೆಹಲಿಯ ಅನೇಕ ಪ್ರದೇಶಗಳಲ್ಲಿ 7 ಗಂಟೆಯಿಂದ 8.30ರ ವರೆಗೆ ಭಾರಿ ಮಳೆಯಾಗಿದೆ. ಸಾಮಾನ್ಯವಾಗಿ, ಮಾನ್ಸೂನ್ ಜೂನ್ 27 ರೊಳಗೆ ದೆಹಲಿಯನ್ನು ತಲುಪುತ್ತದೆ ಮತ್ತು ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಕಳೆದ ವರ್ಷ, ಇದು ಜೂನ್ 25 ರಂದು ದೆಹಲಿಯನ್ನು ಮುಟ್ಟಿತು ಮತ್ತು ಜೂನ್ 29 ರ ಹೊತ್ತಿಗೆ ಇಡೀ ದೇಶವನ್ನು ಆವರಿಸಿತ್ತು.
ಯುಎನ್ಐ ಎಸ್ಎ 1225