Sunday, Sep 26 2021 | Time 19:11 Hrs(IST)
International Share

ಚೀನಾದಲ್ಲಿ ಮಳೆ, ಪ್ರವಾಹ: ಮೃತರ ಸಂಖ್ಯೆ 33 ಕ್ಕೆ ಏರಿಕೆ

ಚೀನಾದಲ್ಲಿ ಮಳೆ, ಪ್ರವಾಹ: ಮೃತರ ಸಂಖ್ಯೆ 33 ಕ್ಕೆ ಏರಿಕೆ
ಚೀನಾದಲ್ಲಿ ಮಳೆ, ಪ್ರವಾಹ: ಮೃತರ ಸಂಖ್ಯೆ 33 ಕ್ಕೆ ಏರಿಕೆ

ಬೀಜಿಂಗ್, ಜುಲೈ 22 (ಯುಎನ್‌ಐ) ಚೀನಾದ ಹೆನಾನ್ ಪ್ರಾಂತ್ಯದದಲ್ಲಿ ಭಾರಿ ಮಳೆ- ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.

ಇತರೆ 8 ಜನರು ಕಾಣೆಯಾಗಿದ್ದಾರೆ ತುರ್ತು ಪರಿಸ್ಥಿತಿಯ ಪ್ರಾದೇಶಿಕ ಇಲಾಖೆ ಗುರುವಾರ ತಿಳಿಸಿದೆ. ಈ ಹಿಂದೆ, ಸುಮಾರು 25 ಮೃತಪಟ್ಟು ಇತರೆ 7 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು.

ವಿಪತ್ತು ಪೀಡಿತ ಪ್ರದೇಶದಲ್ಲಿ 3 ದಶಲಕ್ಷಕ್ಕೂ ಹೆಚ್ಚು ಜನರು ಉಳಿದಿದ್ದಾರೆ ಎಂದು , ಸುಮಾರು 2 ಲಕ್ಷ 56,ಸಾವಿರ ಜನರು ಈವರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಯುಎನ್ಐ ಕೆಎಸ್ಆರ್ 1029