Monday, Oct 18 2021 | Time 23:27 Hrs(IST)
Karnataka Share

ಮೇಲ್ಮನೆಗೆ ಸಚಿವ ಆನಂದ್ ಸಿಂಗ್ ಗೈರು

ಬೆಂಗಳೂರು,ಸೆ.13(ಯುಎನ್ಐ)ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಚಿಂತಕರ ಚಾವಡಿ ವಿಧಾನ ಪರಿಷತ್ತಿನಲ್ಲಿ ಬಹುತೇಕ ಸದಸ್ಯರ ಗೈರು ಎದ್ದುಕಂಡುಬಂದಿದ್ದು,ಅನುಮತಿ ಪಡೆಯದೇ ಸದನಕ್ಕೆ ಗೈರಾಗಿದ್ದ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ವಿರುದ್ಧ ಸಭಾಪತಿಗಳು ಸಿಡುಕಿದ್ದು ಕಂಡುಬಂದಿತು.
ಪ್ರಶ್ನೋತ್ತರ ಕಲಾಪ ವೇಳೆ ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ, ಪ್ರವಾಸೋದ್ಯಮ ಸಚಿವರಿಗೆ ರಾಷ್ಟ್ರೀಯ ಸ್ವಚ್ಛಗಾಳಿ ಕಾರ್ಯಕ್ರಮದಡಿ ರಾಜ್ಯದ ಯಾವಯಾವ ನಗರಗಳನ್ನು ಗುರುತಿಸಿ ಸರ್ಕಾರ ಹಾಕಿಕೊಂಡಿರುವ ಯೋಜನೆಗಳೇನೆಂದು ಪ್ರಶ್ನಿಸಿದರು.
ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಬೇಕಿದ್ದಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸದನಕ್ಕೆ ಉತ್ತರಿಸಲು ಗೈರಾಗಿದ್ದರು. ಆನಂದ್ ಸಿಂಗ್ ಪರವಾಗಿ ಸಭಾನಾಯಕ ಕೋಟಾಶ್ರೀನಿವಾಸ ಪೂಜಾರಿ ಉತ್ತರಿಸಿ, ಸ್ವಚ್ಚ ಗಾಳಿ ಸೇವಿಸುವ ಹಕ್ಕನ್ನು ನೀಡಲು ರಾಜ್ಯದ ಆಯ್ದ ನಗರಗಳನ್ನು ಗುರುತಿಸಲಾಗಿದೆ. ದೂಳಿನ ಪ್ರಮಾಣ ಕಡಿಮೆ ಮಾಡುವುದು,ಹೊಗೆ ರಹಿತ ವಾತಾವರಣ ನಿರ್ಮಾಣ, ಕಟ್ಟಡ ತ್ಯಾಜ್ಯ ನಿರ್ವಹಣೆ ಮೂಲಕ ದೂಳು ಕಡಿಮೆ ಮಾಡುವುದು, ರಸ್ತೆ ಪಕ್ಕ ಗಿಡ ನೆಡುವುದು, ನೀರಿನ ಸಿಂಪಡಣೆ ಸೇರಿ ಧೂಳು ಕಡಿಮೆಗೆ ಯೋಜನೆ ರೂಪಿಸಲಾಗಿದೆ. ಧೂಳು ರಹಿ,ತ,ಪರಿಸರ ಮಾಲಿನ್ಯ ಕಡಿಮೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದ ಬೆಂಗಳೂರು, ದಾವಣಗೆರೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ಇನ್ನು ಕೆಲವು ಜಿಲ್ಲೆಗಳನ್ನು ರಾಷ್ಟ್ರೀಯ ಸ್ವಚ್ಛಗಾಳಿ ಕಾರ್ಯಕ್ರಮಕ್ಕೆ ಆಯ್ದುಕೊಳ್ಳಲಾಗಿದೆ. 2024 ರ ಹೊತ್ತಿಗೆ ಶೇ.40 ರಷ್ಟು ಧೂಳು ಕಡಿಮೆ ಮಾಡುವುದು, ಕಟ್ಟಡ ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆ, ಟ್ರಾಫೀಕ್ ಧೂಳು ನಿರ್ವಹಣೆ, ಸಂಜೆ ವೇಳೆ ರಸ್ತೆಗಳಿಗೆ ನೀರು ಸಿಂಪಡಿಸುವುದು, ರಸ್ತೆ ಬದಿಯಲ್ಲಿ ಕಾಲುದಾರಿ ನಿರ್ಮಾಣ ಸೇರಿದಂತೆ ಬೆಂಗಳೂರಿನಲ್ಲಿ 44 ಅಂಶಗಳಡಿ ಹಾಗೂ ಇತರೆ ಜಿಲ್ಲೆಗಳಲ್ಲಿ 22 ಅಂಶಗಳಡಿ ಕೇಂದ್ರದ ಸ್ವಚ್ಛ ಗಾಳಿ ಯೋಜನೆಯಡಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.2019 ರಲ್ಲಿ ಜಾರಿಗೆ ಬಂದ ಕೇಂದ್ರದ ಯೋಜನೆಯನ್ನು ಸಾಕಾರಗೊಳಿಸಲು 2.60 ಕೋಟಿ ರೂ.ವೆಚ್ಚ ಅನುದಾನವಿದೆ ಎಂದು ಸದನಕ್ಕೆ ಕೋಟಾ ಮಾಹಿತಿ ನೀಡಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಉತ್ತರಕ್ಕೆ ತೃಪ್ತರಾಗದ ಕೆ.ಸಿ.ಕೊಂಡಯ್ಯ, ಸರ್ಕಾರದವರು ಸ್ವಚ್ಛ ಗಾಳಿಗೂ ಕಾರ್ಯಕ್ರಮ ಮಾಡಿದ್ದಾರೆ.ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗುತ್ತಿದೆ,ಆದರೆ ನೀಡಿರುವ ಉತ್ತರ ಅರ್ಥವಾಗುತ್ತಿಲ್ಲ, ಈ ಕಾರ್ಯಕ್ರಮ, ಅಂಕಿ ಅಂಶದ ಬಗ್ಗೆ ಸ್ಪಷ್ಟೀಕರಣ ನೀಡಬೇಕು.ಹಣ ಬಳಕೆಯಾಗಿದೆ ಆದರೆ ಕೆಲಸಗಳು ಆಗಿಲ್ಲ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದಾಗ, ಮಧ್ಯಪ್ರವೇಶಿಸಿದ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್, ಸಂಬಂಧಿಸಿದ ಸಚಿವರು ಉತ್ತರ ನೀಡಬೇಕಿತ್ತು ಎಂದರು.
ಆಗ ಸಚಿವ ಆನಂದ್ ಸಿಂಗ್ ಗೈರಿಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸದನಕ್ಕೆ ಹೇಳದೆ ಕೇಳದೆ ಸಚಿವರು ಗೈರಾಗುವಂತಿಲ್ಲ, ನನ್ನ ಅನುಮತಿ ಪಡೆಯಲೇಬೇಕು ಎಂದು ಸಭಾ ನಾಯಕ ಕೋಟಾಶ್ರೀನಿವಾದ ಪೂಜಾರಿ ಅವರಿಗೆ ಸೂಚಿಸಿದರು.
ಯುಎನ್ಐ ಯುಎಲ್, 1832
More News
ಸರ್ಕಾರದಿಂದಲೇ ಮೈಶುಗರ್ ಪುನಶ್ಚೇತನ

ಸರ್ಕಾರದಿಂದಲೇ ಮೈಶುಗರ್ ಪುನಶ್ಚೇತನ

18 Oct 2021 | 9:46 PM

ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುವ ಸಚಿವ ಸಂಪುಟದ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆ ಹಿಡಿದು, ಸರ್ಕಾರವೇ ನಡೆಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು

 Sharesee more..
1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

18 Oct 2021 | 9:42 PM

1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 Sharesee more..
ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

18 Oct 2021 | 9:39 PM

ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಪರೀಕ್ಷಾ ಕ್ಯಾಮೆರಾಗಳ ಮುಖಾಂತರ ತಪಾಸಣೆಗೊಳಪಡಿಸುವುದು ಅಗತ್ಯ ಎಂದು ಹೇಳಲಾಗಿದೆ. ಇಂಗ್ಲೆಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅನ್ವಯಿಸುವ ಕುರಿತು ಕೇಂದ್ರ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನುಸರಣೆ ಮುಂದುವರಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತದೆ ಎಂದು ಹೇಳಲಾಗಿದೆ.

 Sharesee more..
ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

18 Oct 2021 | 9:27 PM

ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 Sharesee more..

ನಗರದಲ್ಲಿ ಮತ್ತೊಂದು ಬೆಂಕಿ ಅವಘಡ

18 Oct 2021 | 6:20 PM

 Sharesee more..