Wednesday, Sep 29 2021 | Time 04:17 Hrs(IST)
Flash Share

ಮಾಲಿಯಲ್ಲಿ ಭಯೋತ್ಪಾದಕ ದಾಳಿ, 6 ಸಾವು

ಮಾಸ್ಕೋ, ಜೂನ್ 28 (ಯುಎನ್‌ಐ) ಕೇಂದ್ರ ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 6 ಜನರು ಹತರಾಗಿದ್ದಾರೆ.
ಈ ಘಟನೆಯಲ್ಲಿ ಇತರೆ 13 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆರ್‌ಎಫ್‌ಐ ಪ್ರಸಾರಕರ ಪ್ರಕಾರ, ಡುಯೆಂಟ್ಜಾ ಪಟ್ಟಣದ ಬಳಿ ಭಾನುವಾರ ಬಂದೂಕುಧಾರಿಗಳ ಗುಂಪು ಸಾರ್ವಜನಿಕ ಸಾರಿಗೆ ವಾಹನದ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದೆ.ಗಾಯಗೊಂಡವರಲ್ಲಿ 5 ಮಂದಿ ಸ್ಥಿತಿ ಗಂಬೀರ ಎನ್ನಲಾಗಿದೆ .
ಜಿಹಾದಿಗಳಿಂದ ಈ ದಾಳಿ ನಡೆದಿರಬಹುದು. ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನುನಿಯೋಜಿಸಲಾಗಿದೆ ಎಂದು ಮಾಲಿಯನ್ ಸೇನೆ ತಿಳಿಸಿದೆ. 2012 ರಲ್ಲಿ ಟುವಾರೆಗ್ ಉಗ್ರರು ದೇಶದ ಉತ್ತರ ಭಾಗದಲ್ಲಿ ವಿಶಾಲವಾದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಮಾಲಿಯ ಪರಿಸ್ಥಿತಿ ಅಸ್ಥಿರವಾಯಿತು.

ಇಸ್ಲಾಮಿಸ್ಟ್‌ಗಳ ಚಟುವಟಿಕೆಗಳು, ಮಾಜಿ ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿಗೆ ನಿಷ್ಠರಾಗಿರುವ ಶಕ್ತಿಗಳು ಮತ್ತು ಫ್ರೆಂಚ್ ಹಸ್ತಕ್ಷೇಪದ ಬಳಿಕ ಸಂಘರ್ಷ ಇನ್ನಷ್ಟು ಹೆಚ್ಚಾಗಿದೆ .
ಕಳೆದ ಹಲವಾರು ದಿನಗಳಲ್ಲಿ, ಮಾಲಿಯು ಸರಣಿ ದಾಳಿಯನ್ನು ಎದುರಿಸಿತು, ಅದರಲ್ಲಿ ಕನಿಷ್ಠ 13 ಶಾಂತಿಪಾಲಾನ ಯೋಧರು ಗಾಯಗೊಂಡಿದ್ದಾರೆ.
ಯುಎನ್ಐ ಕೆಎಸ್ಆರ್ 0946
There is no row at position 0.