Wednesday, Sep 29 2021 | Time 03:28 Hrs(IST)
Sports Share

ಜುಡೋದಲ್ಲಿ ಭಾರತದ ಸವಾಲು ಅಂತ್ಯ

ಟೋಕಿಯೊ, ಜು.24 (ಯುಎನ್ಐ)- ಶನಿವಾರ ಇಲ್ಲಿ ನಡೆದ ಮಹಿಳಾ 48 ಕೆಜಿ ಆರಂಭಿಕ ಜೂಡೋ ಸುತ್ತಿನಲ್ಲಿ ಭಾರತದ ಆಟಗಾರ್ತಿ ಸುಶೀಲಾ ದೇವಿ ಲಿಕ್ಮಾಬಾಮ್ ಹಂಗೇರಿಯ ಇವಾ ಸೆರ್ನೋವಿಕ್ ವಿರುದ್ಧ 10-0 ರಿಂದ ಸೋತರು. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ 2020 ರಲ್ಲಿ ಜೂಡೋದಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಆಟಗಾರ್ತಿ ಸುಶೀಲಾ ದೇವಿ ಮತ್ತು ಅವರ ಸೋಲು ಜೂಡೋದಲ್ಲಿ ಭಾರತದ ಸವಾಲನ್ನು ಕೊನೆಗೊಳಿಸಿತು.

ಲಂಡನ್ 2012 ರ ಒಲಿಂಪಿಕ್ ಕಂಚಿನ ಪದಕ ವಿಜೇತ ಸೆರ್ನೋವಿಕ್ ಗೆಲುವಿನೊಂದಿಗೆ ಕೊನೆಯ 16 ಕ್ಕೆ ಮುನ್ನಡೆದರು, ಅಲ್ಲಿ ಅವರು ಜಪಾನ್‌ನ ಫೂನಾ ಟೋನಕಿಯನ್ನು ಎದುರಿಸಲಿದ್ದಾರೆ.

ನಿಪ್ಪಾನ್ ಬುಡೋಕಾನ್ ಪ್ರದೇಶದಲ್ಲಿ ತನ್ನ ಆಟದ ಪ್ರಾರಂಭದಲ್ಲಿ, ಸುಶೀಲಾ ಮೊದಲ ದಾಳಿಯನ್ನು ವಿಫಲಗೊಳಿಸಿದರು. ಮತ್ತು ಇಬ್ಬರು ಹಿಡಿತದಿಂದ ಪಾರಾಗಲು ಶಿಡೋ (ಪೆನಾಲ್ಟಿ) ನೀಡಲಾಯಿತು. ಸೆರ್ನೋವಿಕ್ಜ್ ತನ್ನ ಅನುಭವವನ್ನು ಬಳಸಿಕೊಂಡು ಆಡಿ ಜಯ ಸಾಧಿಸಿದರು.

ಯುಎನ್ಐ ವಿಎನ್ಎಲ್ 1838