Sunday, Sep 26 2021 | Time 18:10 Hrs(IST)
Special Share

ಯುಪಿಯಲ್ಲಿ ಭೀಕರ ರಸ್ತೆ ಅಪಘಾತ: 7 ಜನರ ದುರ್ಮರಣ

ಸಂಭಾಲ್, ಜುಲೈ 19 (ಯುಎನ್ಐ) ಮೊರಾದಾಬಾದ್- ಆಗ್ರಾ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಎರಡು ಬಸ್ಸುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಇತರೆ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈರ್ ಸ್ಫೋಟಗೊಂಡ ನಂತರ ಮಜೌಲಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟೈರ್ ಬದಲಾಯಿಸುವಾಗ, ಮತ್ತೊಂದು ಬಸ್ ಅದಕ್ಕೆ ಬಲವಾಗಿ ಗುದ್ದಿದಾಗ 7 ಜನರು ಪ್ರಯಾಣಿಕರು ಸಾವನ್ನಪ್ಪಿ, ಇತರೆ 10 ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ವೀರಪಾಲ್ (60), ರಾಕೇಶ್ (55), ಭುರೆ (40), ರಾಘವೇಂದ್ರ (35), ಚೋಟೆ ಸಿಂಗ್ (35), ಅಭಯ್ (18) ಮತ್ತು ವಿನೀತ್ (32) ಎಂದು ಗುರುತಿಸಲಾಗಿದೆ. ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿಗ್ಭಮೆ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಯುಎನ್ಐ ಕೆಎಸ್ಆರ್ 1002