Wednesday, Oct 20 2021 | Time 16:20 Hrs(IST)
Karnataka Share

ರಾಜ್ಯದ ಶಾಲೆಗಳ ಪುನಾರಂಭ ಕುರಿತು ಇಂದು ನಿರ್ಧಾರ

ಬೆಂಗಳೂರು, ಆ 30 (ಯುಎನ್ಐ) ರಾಜ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕದಿಂದ ಕಳೆದ 18 ತಿಂಗಳುಗಳಿಂದ ಮುಚ್ಚಿರರುವ ಶಾಲೆಗಳನ್ನು ಪುನಃ ತೆರೆಯುವ ನಿಟ್ಟಿನಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಭೆ ಕರೆಯಲಾಗಿದೆ.
ರಾಜ್ಯ ಸರ್ಕಾರವು ಆಗಸ್ಟ್ 23 ರಂದು ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಿದೆ.
ಭಾನುವಾರ ರಾಜ್ಯದಲ್ಲಿ 1,262 ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು, 17 ಸಾವುಗಳು ಸಂಭವಿಸಿವೆ.
ರಾಜ್ಯವು ಶೇ. 1.34 ಮರಣ ಪ್ರಮಾಣ ಮತ್ತು ಶೇ. 0.70 ಸಕಾರಾತ್ಮಕ ದರವನ್ನು ದಾಖಲಿಸಿದೆ.
ಶೇ. 2ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ದಾಖಲಾಗಿರುವ ಜಿಲ್ಲೆಗಳಲ್ಲಿ ಮಾತ್ರ ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯಲು ಸರ್ಕಾರ ಯೋಜಿಸಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಪೋಷಕರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಶಾಲಾ ಆವರಣ ಪ್ರವೇಶಿಸಲು ಕೋವಿಡ್‌ ಲಸಿಕೆ ಕಡ್ಡಾಯಗೊಳಿಸುವ ನಿರೀಕ್ಷೆಯಿದೆ.
ಯುಎನ್ಐ ಎಸ್ಎಚ್ 1229
More News
ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 2:57 PM

ಬೆಂಗಳೂರು,ಅ.

 Sharesee more..
ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

20 Oct 2021 | 2:56 PM

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು.

 Sharesee more..
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

20 Oct 2021 | 2:53 PM

ಬೆಂಗಳೂರು,ಅ.

 Sharesee more..
ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 2:52 PM

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.

 Sharesee more..