Friday, Oct 22 2021 | Time 05:09 Hrs(IST)
Special Share

ಮುಂಬೈ ಅತ್ಯಾಚಾರ ಘಟನೆ.. ಬಾಧಿತೆ ಸಾವು

ಮುಂಬೈ, ಸೆ 11 (ಯುಎನ್‌ ಐ) ಮಹಾರಾಷ್ಟ್ರದ ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ ಭೀಕರವಾಗಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ಥ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸಂತ್ರಸ್ತೆಯನ್ನು ಗಟ್ಕೋಪರ್ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮುಂಬೈನ ಸಾಕಿ ನಾಕಾ ಪ್ರದೇಶದ ಖೈರಾನಿ ಮಾರ್ಗದಲ್ಲಿ ಶುಕ್ರವಾರ 35 ವರ್ಷ ವಯಸ್ಸಿನ ಸಂತ್ರಸ್ತೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದರು. ನಂತರ ಬಾಧಿತೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ಸಲಾಕೆ ಹಾಕಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದರು. ಆಕೆಯ ದೇಹದಿಂದ ವಿಪರೀತ ರಕ್ತಸ್ರಾವವಾಗಿ .. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಧಿತೆಯನ್ನು ದಾರಿ ಹೋಕರು ಗುರುತಿಸಿ .. ಗಟ್ಕೋಪರ್ ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದರು.
ವಿಷಯ ತಿಳಿದುಕೊಂಡ ಮುಂಬೈ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ 45 ವರ್ಷ ವಯಸ್ಸಿನ ವ್ಯಕ್ತಿಯನ್ನು ಅಪರಾಧಿ ಎಂದು ಗುರುತಿಸಿದ್ದರು. ದುಷ್ಕೃತ್ಯದ ನಂತರ ಆರೋಪಿಗಳು ಟೆಂಪೋ ವಾಹನದಲ್ಲಿ ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ದುಷ್ಕೃತ್ಯದಲ್ಲಿ ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆಯ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಆಘಾತ ವ್ಯಕ್ತಪಡಿಸಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದೆ. ಈ ಸಂಬಂಧ ಮಹಾರಾಷ್ಟ್ರ ಸಂಪುಟ ಸಚಿವ ನವಾಬ್ ಮಲಿಕ್, "ನಮಗೆ ನೀಡಿದ ಸಮಯದೊಳಗೆ ಆರೋಪಪಟ್ಟಿ ಸಲ್ಲಿಸುತ್ತೇವೆ.. ನಾವು ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಯುಎನ್‌ ಐ ಕೆವಿಆರ್‌ 1639
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..