Wednesday, Dec 1 2021 | Time 21:19 Hrs(IST)
Karnataka Share

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ
HINDUJSNAJAGRUTI PROTEST

ಬೆಂಗಳೂರು,ಅ.20(ಯುಎನ್‌ಐ)ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ,ಶ್ರೀರಾಮಸೇನೆ,

ಅಖಿಲ ಭಾರತ ಹಿಂದೂ ಮಹಾಸಭಾ,ಬಜರಂಗದಳ,ಅಯ್ಯಪ್ಪ ಸೇವಾ ಸಮಾಜಮ್ ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು. ಅದಲ್ಲದೇ 23 ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದರು, 17 ಹಿಂದೂಗಳು ಕಾಣೆಯಾಗಿದ್ದಾರೆ. 13 ಹಿಂದೂಗಳ ಹತ್ಯೆ ನಡೆದಿದೆ.ಬಾಂಗ್ಲಾದೇಶದಲ್ಲಿ ಮತಾಂದ ಮುಸಲ್ಮಾನರು ಬೆಳಗ್ಗಿನ ಜಾವದಲ್ಲಿ ದುರ್ಗಾ ಮಂದಿರದ ಭದ್ರತಾ ಸಿಬ್ಬಂದಿ ಮಲಗಿರುವಾಗ ಹನುಮಾನ್ ಮುರ್ತಿಯ ಕಾಲು ಮೇಲೆ ಕುರಾನ್ ಇಟ್ಟು ಅದರ ಪೋಟೋ ತೆಗೆದು ಇಸ್ಲಾಮ್ ಅಪಮಾನ ಮಾಡಲಾಗಿದೆ ಎಂದು ಸೊಸಿಯಲ್ ಮೆಡಿಯಾ ಮೂಲಕ ಹಿಂದೂಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಬಾಂಗ್ಲಾದೇಶದಾದ್ಯಂತ ಸಾವಿರಾರು ದುರ್ಗಾದೇವಿಯ ಪೆಂಡಾಲ ಮೇಲೆ, ನವರಾತ್ರಿಯ ಮಂಟಪದ ಮೇಲೆ ಆಕ್ರಮಣ ಮಾಡಿದರು. 1947 ರಲ್ಲಿ ಡೈರೆಕ್ಟ್ ಅಕ್ಸನ್ ಹತ್ಯೆಯಂತೆ ವ್ಯವವಸ್ಥಿತ ರೀತಿಯಲ್ಲಿ ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗಿದೆ.ಅದಕ್ಕಾಗಿ ಭಾರತ ಸರ್ಕಾರವು ಬಾಂಗ್ಲಾದೇಶದ ಸರ್ಕಾರದ ಜೊತೆಗೆ ಹಿಂದೂಗಳ ರಕ್ಷಣೆಯ ವಿಷಯದಲ್ಲಿ ಮಾತನಾಡಬೇಕು. ಅಲ್ಲಿನ ಹಿಂದೂಗಳ ರಕ್ಷಣೆಗೆ ಪ್ರಯತ್ನ ಮಾಡಬೇಕು ಎಂದರು.

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಆಗದವರೆಗೆ ಬಾಂಗ್ಲಾದೇಶದ ಜೊತೆಗೆ ಎಲ್ಲಾ ವ್ಯಾಪಾರ ವಹಿವಾಟು ನಿಲ್ಲಿಸಬೇಕು. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಕ್ರಮಣ ಮಾಡಿದ ಎಲ್ಲಾ ಮತಾಂದರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂ ಜನಜಾಗೃತಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ್, ಸುರೇಶ ಜೈನ್, ಎಮ್ ಎಲ್ ಶಿವ ಕುಮಾರ,ಶಕಿಲಾ ಶೆಟ್ಟಿ, ವಿಜಯ ಕಂಗನ್ ಮತ್ತಿತ್ತರರು ಪಾಲ್ಗೊಂಡಿದ್ದರು.

More News

ಎಸ್ ಆರ್ ವಿಶ್ವನಾಥ್‌ಗೆ ಬಿಗಿಭದ್ರತೆ

01 Dec 2021 | 5:59 PM

 Sharesee more..
ಬೆಳಗಾವಿಯಲ್ಲಿ  ಸದ್ಯ ಅಧಿವೇಶನ ರದ್ದುಪಡಿಸಿ

ಬೆಳಗಾವಿಯಲ್ಲಿ ಸದ್ಯ ಅಧಿವೇಶನ ರದ್ದುಪಡಿಸಿ

01 Dec 2021 | 5:29 PM

ಸಚಿವಾಲಯದ ನೌಕರರ ಸಂಘದಿಂದ ಮನವಿ

 Sharesee more..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

01 Dec 2021 | 4:37 PM

ಕರ್ನಾಟಕದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವು ನದಿಗಳು ಬಾಕಿ ಇರುವುದರಿಂದ ದಿನದಿಂದ ದಿನಕ್ಕೆ ಚುರುಗೊಳ್ಳುತ್ತಿರುವ ಮತದಾರರ ಓಲೈಕೆ‌ ಪ್ರಕ್ರಿಯೆ.

 Sharesee more..