Sunday, Sep 26 2021 | Time 18:15 Hrs(IST)
Special Share

ಮುಂಬೈನಲ್ಲಿ ಭಾರಿ ಮಳೆ,- ಸಂಚಾರ , ಜನಜೀವನ ಅಸ್ತವ್ಯಸ್ತ

ಮುಂಬೈ, ಜುಲೈ 16 (ಯುಎನ್ಐ) ಮುಂಬೈನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಮಳೆ ಸುರಿಯುತ್ತಿದ್ದು ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿರಸ್ತೆ, ರೈಲು , ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆ ಕಾರಣ ರೈಲು ಸಂಚಾರ ವಿಳಂಬ ವಾಗಿದೆ ಮತ್ತು ಬಸ್ ಮಾರ್ಗಗಳಲ್ಲಿ ಬದಲಾವಣೆಗೆ ಮಾಡಲಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಮುಂಬೈ ಮತ್ತು ಉಪನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬೈನ ಉಪನಗರಗಳಲ್ಲಿನ ಹಲವು ತಗ್ಗು ಪ್ರದೇಶಗಳು ಈಗಾಗಲೇ ಜಲಾವೃತವಾಗಿವೆ.
ಮುಂಬೈ, ಥಾಣೆ, ನವಿ ಮುಂಬೈ ಮತ್ತು ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ ರಾಯಗಢ ಜಿಲ್ಲೆಯ ಕೆಲವು ಭಾಗಗಳಲ್ಲಿ ಇದೆ ರೀತಿಯ ಮುನ್ಸೂಚನೆಗಳನ್ನು ನೀಡಲಾಗಿದೆ ಎಂದು ಇಲಾಖೆ ವರದಿ ಹೇಳಿದೆ.
ಯುಎನ್ಐ ಕೆಎಸ್ಆರ್ 1208