Monday, Sep 20 2021 | Time 07:02 Hrs(IST)
National Share

ವೈದ್ಯರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ

ವೈದ್ಯರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ
ವೈದ್ಯರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ, ಜೂ 27 (ಯುಎನ್ಐ) ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ವೈದ್ಯರ ಅವಿರತ ಸೇವೆಗೆ ಇಡೀ ರಾಷ್ಟ್ರ ಕೃತಜ್ಞರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ “ಮನ್ ಕಿ ಬಾತ್” ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ 1 ರಂದು ನಾವು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಿದ್ದೇವೆ ಮತ್ತು ಈ ವರ್ಷ ಇದನ್ನು ಶ್ರೇಷ್ಠ ವೈದ್ಯ ಮತ್ತು ರಾಜಕಾರಣಿ ಡಾ.ಬಿ.ಸಿ.ರಾಯ್ ಅವರಿಗೆ ಸಮರ್ಪಿಸಲಾಗುತ್ತಿದೆ ಎಂದರು.

ತಮ್ಮ ಜೀವನವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ವೈದ್ಯರ ಕೊಡುಗೆ ಸ್ಮರಿಸುವ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ವೈದ್ಯರ ದಿನವು ಹೆಚ್ಚು ಮಹತ್ವದ್ದಾಗಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಪಟ್ಟುಬಿಡದೆ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಹಾಯ ಮಾಡಲು ಅನೇಕ ಜನರು ಮುಂದೆ ಬಂದಿದ್ದಾರೆ ಎಂದರು.

ಶ್ರೀನಗರದ ತಾರಿಕ್ ಅಹ್ಮದ್ ಪಟ್ಲೂ ಅವರು ದಾಲ್ ಸರೋವರದಲ್ಲಿ ದೋಣಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದರು. ಅವರು ಸ್ವತಃ ಕೋವಿಡ್-19 ರೊಂದಿಗೆ ಹೋರಾಡಿದ್ದು, ಅದು ಅವರಿಗೆ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಲು ಪ್ರೇರೇಪಿಸಿತು ಎಂದು ಪ್ರಧಾನಿ ಹೇಳಿದರು.

ಯುಎನ್ಐ ಎಸ್ಎಚ್ 1344