Sunday, Sep 26 2021 | Time 19:33 Hrs(IST)
Sports Share

ಯೂರೋ ಕಪ್: ಶೂಟೌಟ್‌ನಲ್ಲಿ ಸೋತ ಫ್ರಾನ್ಸ್

ಬುಕಾರೆಸ್ಟ್, ಜೂ.29 (ಯುಎನ್ಐ)- ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಸ್ವಿಟ್ಜರ್‌ಲೆಂಡ್ ತಂಡ, ಯೂರೋ ಕಪ್ ಫುಟ್ಬಾಲ್ ಪಂದ್ಯಾವಳಿಯ ಎಂಟರ ಹಂತ ಕಂಡಿತು.
ಸೋಮವಾರ ನ್ಯಾಷನಲ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ನಿಗದಿತ ೯೦ ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ತಲಾ ಮೂರು ಗೋಲು ಬಾರಿಸಿದ್ದರಿಂದ ಪಂದ್ಯ ಸಮಸ್ಥಿತಿಯಲ್ಲಿತ್ತು.
ಖಚಿತ ಫಲಿತಾಂಶಕ್ಕಾಗಿ ತಲಾ ಹದಿನೈದು ನಿಮಿಷಗಳಿಗೂ ಎರಡು ಹೆಚ್ಚುವರಿ ಅವಧಿಯನ್ನು ನೀಡಲಾತಾದರೂ, ಆ ಅವಧಿಯಲ್ಲಿ ಕೂಡ ಯಾವುದೇ ತಂಡ ಗೋಲು ಗಳಿಸುವಲ್ಲಿ ವಿಫಲವಾದವು.
ಹೀಗಾಗಿ ಖಚಿತ ಫಲಿತಾಂಶಕ್ಕಾಗಿ ಶೂಟೌಟ್‌ಗೆ ಮೋರೆ ಹೋಗಲಾಯಿತು. ಶೂಟೌಟ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಐವರು ಆಟಗಾರರು ಗೋಲಾಗಿಸುವಲ್ಲಿ ಯಶಸ್ಸಿಯಾದರು.
ಫ್ರಾನ್ಸ್‌ನ ನಾಲ್ವರು ಆಟಗಾರರು ಚೆಂಡನ್ನು ಗೋಲಾಗಿಸುವಲ್ಲಿ ಯಶ ಕಂಡರು. ಆದರೆ ಸ್ವಿಟ್ಜರ್‌ಲೆಂಡ್ ಗೋಲು ರಕ್ಷಕ ಯಾನ್ ಸೊಮರ್, ಕೈಲಿಯಾನ್ ಮಬಾಪೆ ಅವರ ಕ್ಕಿಕ್ ಅನ್ನು ಯಶಸ್ಸಿಯಾಗಿ ತಡೆಯುವ ಮೂಲಕ ತಂಡಕ್ಕೆ ರೋಚಕ ಲಭಿಸುವಲ್ಲಿ ಪ್ರಮುಖ ಪಾತ್ರವನ್ನಾಡಿದರು.
ಸೋಮವಾರ ತಡ ರಾತ್ರಿ ನಡೆದ ಇನ್ನೊಂದು ಹದಿನಾರರ ಹಂತದ ಪಂದ್ಯದಲ್ಲಿ ಸ್ಪೇನ್, ಕ್ರೊಯೇಯಾ ತಂಡದ ವಿರುದ್ಧ 5-3 ಗೋಲುಗಳ ಭರ್ಜರಿ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತ ಕಂಡಿತು.
ಯುಎನ್ಐ ವಿಎನ್ಎಲ್ 2012