Sunday, Sep 26 2021 | Time 17:28 Hrs(IST)
National Share

ವೈದ್ಯರ ಕೊಡುಗೆಗೆ ಪ್ರಧಾನಮಂತ್ರಿ ಪ್ರಶಂಸೆ

ನವದೆಹಲಿ, ಜೂನ್‍ 27(ಯುಎನ್‍ಐ)- ಕೋವಿಡ್ ಸಾಂಕ್ರಾಮಿಕ ವೇಳೆ ಅವಿರತ ಶ್ರಮಿಸುತ್ತಿರುವ ವೈದ್ಯರ ಸೇವೆಗೆ ಇಡೀ ದೇಶ ಕೃತಜ್ಞವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಆಕಾಶವಾಣಿಯಲ್ಲಿ ಭಾನುವಾರ ಪ್ರಸಾರವಾದ ಮಾಸಿಕ ‘ ಮನ್‍ ಕಿ ಬಾತ್‍’ ಕಾರ್ಯಕ್ರಮವನ್ನು ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಈ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಆಚರಣೆಯನ್ನು ಮಹಾ ವೈದ್ಯ ಡಾ ಬಿ ಸಿ ರಾಯ್ ‍ಅವರಿಗೆ ಸಮರ್ಪಿಸಲಾಗುವುದು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಸೇವೆಗಾಗಿ ಶ್ರಮಿಸುತ್ತಿರುವ ವೈದ್ಯರ ಕೊಡುಗೆಗೆ ನಾವೆಲ್ಲ ಕೃತಜ್ಞರಾಗಿದ್ದೇವೆ. ಕೋವಿಡ್‍ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ‘ವೈದ್ಯರ ದಿನ’ ಹೆಚ್ಚು ಮಹತ್ವವೆನಿಸಿದೆ ಎಂದು ಅವರು ಹೇಳಿದ್ದಾರೆ.
‘ಕೋವಿಡ್ ಸಾಂಕ್ರಾಮಿಕದ ವೇಳೆ ಅವಿರತ ಶ್ರಮಿಸುತ್ತಿರುವ ವೈದ್ಯರಿಗೆ ಸಹಾಯ ಮಾಡಲು ಅಪಾರ ಜನರು ಮುಂದೆ ಬರುತ್ತಿದ್ದಾರೆ. ಶ್ರೀನಗರದಲ್ಲಿ ದಲ್‍ ಸರೋವರದಲ್ಲಿ ಆಂಬ್ಯಲೆನ್ಸ್ ದೋಣಿ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯನ್ನು ಕೋವಿಡ್‍ ಸೋಂಕು ವಿರುದ್ಧ ಹೋರಾಡಿದ ದೋಣಿ ಮಾಲೀಕರೇ ಆರಂಭಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಯುಎನ್‍ಐ ಎಸ್‍ ಎಲ್‍ ಎಸ್ 1325
More News
ಅಧಿಕೃತ ಇಮೇಲ್ಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆಕ್ಷೇಪಣೆ ನಂತರ ಕೈಬಿಟ್ಟ ಎನ್ಐಸಿ

ಅಧಿಕೃತ ಇಮೇಲ್ಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆಕ್ಷೇಪಣೆ ನಂತರ ಕೈಬಿಟ್ಟ ಎನ್ಐಸಿ

24 Sep 2021 | 10:23 PM

ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಎನ್ಐಸಿಗೆ ಪತ್ರವನ್ನು ಬರೆದ ನಂತರ ಎನ್ಐಸಿ ಮೋದಿ ಭಾವಚಿತ್ರವುಳ್ಳ ಬ್ಯಾನರ್ ಅಂಚನ್ನು ಸುಪ್ರೀಂ ಕೋರ್ಟ್ನ ಅಧಿಕೃತ ಇಮೇಲ್ಗಳಿಂದ ತೆಗೆದುಹಾಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ, ಈ ಪ್ರಕಟಣೆಯಲ್ಲಿ ತನ್ನ ಇಮೇಲ್ಗಳ ಅಂಚಿಗೆ ಲಗತ್ತಿಸಿದ್ದ ಚಿತ್ರದ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

 Sharesee more..

85 ಕೋಟಿ ಜನರಿಗೆ ಕೋವಿಡ್ ಲಸಿಕೆ

24 Sep 2021 | 9:23 AM

 Sharesee more..