Wednesday, Oct 20 2021 | Time 14:42 Hrs(IST)
Special Share

ಮೋದಿ ಜನ್ಮ ದಿನ ಸಂಭ್ರಮ ಭಾರಿ ಕೇಕ್‌ ಗಳು ಮರಳು ಶಿಲ್ಪ

ನವದೆಹಲಿ, ಸೆ 17(ಯುಎನ್‌ ಐ)- ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಹಲವರು ಕೇಂದ್ರ ಸಚಿವರು, ಇತರ ರಾಜಕೀಯ ಪಕ್ಷಗಳು ಶುಭಾಶಯ ಕೋರಿದ್ದಾರೆ. ಅದೇ ರೀತಿ ಸಿನಿಮಾ, ಕ್ರೀಡಾ ದಿಗ್ಗಜರು ಕೂಡ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಆವರಿಸಿಕೊಂಡಿದೆ.
ವಿಶೇಷವಾಗಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮೋದಿ ಜನ್ಮದಿನವನ್ನು ಭವ್ಯವಾಗಿ ಆಚರಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಸಿರಂಜ್‌ ಆಕಾರದಲ್ಲಿ 71 ಅಡಿ ಉದ್ದದ ಕೇಕ್ ಕತ್ತರಿಸುವ ಮೂಲಕ ಪ್ರಧಾನಿಗೆ ಶುಭ ಹಾರೈಸಿದ್ದಾರೆ. ಭೋಪಾಲ್ ನಲ್ಲಿ 71 ಅಡಿ ಕೇಕ್ ಕತ್ತರಿಸಲಾಗಿದೆ. 71 ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಲಿದ್ದಾರೆ. ಮೋದಿಯವರ ಸಂಸತ್ ಕ್ಷೇತ್ರ ವಾರಣಾಸಿಯಲ್ಲಿ ಸೆಪ್ಟೆಂಬರ್ 16 ರಂದು ಮಣ್ಣಿನ ದೀಪಗಳನ್ನು ಹಚ್ಚಿ 71 ಕೆಜಿ ಲಡ್ಡು ಹಂಚಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ, 'ಕಾಶಿ ಸಂಕಲ್ಪ' ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಮತ್ತೊಂದು ಕಡೆ ಪ್ರಮುಖ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ ಪ್ರಧಾನಿ ಮೋದಿ ಮರಳು ಶಿಲ್ಪವನ್ನು ರಚಿಸಿದ್ದಾರೆ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪಟ್ನಾಯಕ್, ಸಮುದ್ರ ಚಿಪ್ಪುಗಳಿಂದ ವಿಶೇಷವಾಗಿ ರೂಪಿಸಿದ ಮರಳು ಶಿಲ್ಪ ದ ಚಿತ್ರ ಫೋಟೋವನ್ನು ಹಂಚಿಕೊಂಡಿದ್ದಾರೆ. ಗೌರವಾನ್ವಿತ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮಹಾಪ್ರಭು ಜಗನ್ನಾಥ ಸ್ವಾಮಿಯ ಆಶೀರ್ವಾದ ಅವರಿಗೆ ಶಾಶ್ವತವಾಗಿರಲಿ, ದೀರ್ಘಾಯುಷ್ಯ ನೀಡಲಿ ಎಂದು ಶುಭಾಶಯ ಕೋರಿದ್ದಾರೆ.
ಯುಎನ್‌ ಐ ಕೆವಿಆರ್‌ 1453