Monday, Sep 20 2021 | Time 07:21 Hrs(IST)
National Share

ಮುಂಬೈನಲ್ಲಿ ಧಾರಾಕಾರ ಮಳೆ

ಮುಂಬೈ, ಜುಲೈ 14 (ಯುಎನ್‌ಐ) ಮಹಾನಗರ ನಗರದ ವಿವಿಧ ಭಾಗಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಇಲ್ಲಿನ ಪರೆಲ್ ಮತ್ತು ಸಿಯಾನ್ ಪ್ರದೇಶಗಳು ಜಲಾವೃತವಾಗಿವೆ.

ಮುಂಬೈ ಮತ್ತು ನೆರೆಯ ಥಾಣೆಗೆ ಆರೇಂಜ್‍ (ಕಿತ್ತಳೆ) ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಅಲ್ಲಲ್ಲಿ ಚದುರಿದಂತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಪುಣೆ, ರಾಯಗಡ, ರತ್ನಗಿರಿ, ಕೊಲ್ಹಾಪುರ ಮತ್ತು ಸತಾರ ಜಿಲ್ಲೆಗಳಿಗೆ ಕೆಂಪು ಎಚ್ಚರಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದ್ವೀಪ ನಗರವಾದ ಮುಂಬೈ, ಪೂರ್ವದ ಉಪನಗರಗಳು ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 100.33 ಮಿಮೀ, 61.48 ಮಿಮೀ ಮತ್ತು 63.36 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರ ಮತ್ತು ಉಪನಗರಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಯುಎನ್ಐ ಎಸ್ಎಲ್ಎಸ್ 1031