Wednesday, Oct 20 2021 | Time 16:37 Hrs(IST)
Sports Share

ಹೂಡಾ-ಐಡೇನ್ ಜೊತೆಯಾಟ, ಮುಂಬೈಗೆ 136 ರನ್ ಗುರಿ

ಅಬುಧಾಬಿ, ಸೆ.28 (ಯುಎನ್ಐ)- ಭರವಸೆಯ ಆಟಗಾರ ಐಡೇನ್ ಮಾರ್ಕನ್ (42 ರನ್) ಇವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 14ನೇ ಆವೃತ್ತಿಯ ಐಪಿಎಲ್ ನ 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ 136 ರನ್ ಗಳ ಗುರಿ ನೀಡಿದೆ.
ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 135 ರನ್ ಸೇರಿಸಿತು.

ಪಂಜಾಬ್ ಪರ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್ ರಾಹುಲ್ ಹಾಗೂ ಮಂದೀಪ್ ಸಿಂಗ್ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಲ್ಲದೆ ಮೊದಲ ವಿಕೆಟ್ ಗೆ 36 ರನ್ ಸೇರಿಸಿತು. ಮಂದೀಪ್ ಸಿಂಗ್ 15 ರನ್ ಗಳಿಗೆ ಔಟ್ ಆದರು.

ನಾಯಕ ರಾಹುಲ್ 22 ಎಸೆತಗಳಲ್ಲಿ 21 ರನ್ ಬಾರಿಸಿ ಪೊಲಾರ್ಡ್ ಎಸೆತದಲ್ಲಿ ಬುಮ್ರಾ ಗೆ ವಿಕೆಟ್ ಒಪ್ಪಿಸಿದರು. ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (1), ಮಧ್ಯಮ ಕ್ರಮಾಂಕದ ನಿಕೋಲಸ್ ಪೋರನ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಐದನೇ ವಿಕೆಟ್ ಗೆ ದೀಪಕ್ ಹೂಡಾ ಹಾಗೂ ಐಡೇನ್ ಜೋಡಿ ಮನಮೋಹಕ ಬ್ಯಾಟಿಂಗ್ ನಡೆಸಿತು. ಈ ಜೋಡಿ ಮುಂಬೈ ಬೌಲರ್ ಗಳ ಬೆವರಿಳಿಸಿ ರನ್ ಕಲೆ ಹಾಕುತ್ತಾ ಸಾಗಿತು. ಸ್ಟಾರ್ ಬೌಲರ್ ಗಳ ವಿರುದ್ಧ ರನ್ ಕಲೆ ಹಾಕಿದ ಜೋಡಿ ಅಬ್ಬರಿಸಿತು. ಹೂಡಾ-ಐಡೇನ್ ಜೋಡಿ 47 ಎಸೆತಗಳಲ್ಲಿ 61 ರನ್ ಸೇರಿಸಿತು. ಐಡೇನ್ ಮಾರ್ಕನ್ 6 ಬೌಂಡರಿ ಸೇರಿದಂತೆ 42 ರನ್ ಬಾರಿಸಿದರು. ದೀಪಕ್ ಹೂಡಾ 28, ಹರ್ಪಿತ್ ಬ್ರಾರ್ 14 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು.

ಮುಂಬೈ ಪರ ಜಸ್ಪ್ರಿತ್ ಬುಮ್ರಾ ಹಾಗೂ ಕೀರನ್ ಪೊಲಾರ್ಡ್ ತಲಾ ಎರಡು ವಿಕೆಟ್ ಪಡೆದರು.

ಯುಎನ್ಐ ವಿಎನ್ಎಲ್ 2125
More News
ಟಿ-20 ವಿಶ್ವಕಪ್; ಪಾಕ್ ವಿರುದ್ಧ ಭಾರತ ಪಂದ್ಯ ಆಡದಿದ್ದರೆ ಏನಾಗುತ್ತೆ?

ಟಿ-20 ವಿಶ್ವಕಪ್; ಪಾಕ್ ವಿರುದ್ಧ ಭಾರತ ಪಂದ್ಯ ಆಡದಿದ್ದರೆ ಏನಾಗುತ್ತೆ?

19 Oct 2021 | 5:04 PM

ಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಆಡಬಾರದೆಂಬ ಬೇಡಿಕೆ ಹೆಚ್ಚ ತೊಡಗಿದೆ. ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದ ವಿರುದ್ಧ ಪಂದ್ಯ ಆಡಲು ನಿರಾಕರಿಸಿದರೆ, ಭಾರತಕ್ಕೆ ಹೆಚ್ಚು ತೊಂದರೆ ಹಾಗೂ ನಷ್ಟ ಅನುಭವಿಸಬೇಕಾಗುತ್ತದೆ.

 Sharesee more..
ಟಿ-20 ವಿಶ್ವಕಪ್; ಪಾಕಿಸ್ತಾನ ನಾಯಕನ ಕ್ರಮಕ್ಕೆ ಮೆಚ್ಚುಗೆ!

ಟಿ-20 ವಿಶ್ವಕಪ್; ಪಾಕಿಸ್ತಾನ ನಾಯಕನ ಕ್ರಮಕ್ಕೆ ಮೆಚ್ಚುಗೆ!

19 Oct 2021 | 1:52 PM

ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದ ಮಧ್ಯೆ ನಿನ್ನೆ ನಡೆದ ವಾರ್ಮ್ ಅಪ್ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

 Sharesee more..