Wednesday, Sep 29 2021 | Time 04:52 Hrs(IST)
Sports Share

ಬೆಳ್ಳಿ ಪದಕ ದೇಶಕ್ಕೆ ಸಮರ್ಪಣೆ: ಮಿರಾಬಾಯ್ ಚಾನು

ಬೆಳ್ಳಿ ಪದಕ ದೇಶಕ್ಕೆ ಸಮರ್ಪಣೆ: ಮಿರಾಬಾಯ್ ಚಾನು
ಬೆಳ್ಳಿ ಪದಕ ದೇಶಕ್ಕೆ ಸಮರ್ಪಣೆ: ಮಿರಾಬಾಯ್ ಚಾನು

ಟೋಕಿಯೋ, ಜುಲೈ 24 (ಯುಎನ್ಐ) ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದ ಮೊದಲ ಬೆಳ್ಳಿ ಪದಕವನ್ನು ದೇಶಕ್ಕೆ ಸಮರ್ಪಿಸಿವುದಾಗಿ ಕ್ರಿಡಾಪಟು ಮಿರಾಬಾಯ್ ಚಾನು ಹೇಳಿದ್ದಾರೆ.

ಬೆಳ್ಳಿ ಪದಕ ಗೆದ್ದ ಖುಷಿಯನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಅವರು ನನ್ನ ಕನಸು ನನಸಾಯಿತು. ಈ ಬೆಳ್ಳಿ ಪದಕವನ್ನು ದೇಶಕ್ಕೆ ಅರ್ಪಿಸಲು ಇಷ್ಟಪಡುವುದಾಗಿ ಅಭಿಮಾನದಿಂದ ಹೇಳಿದರು.

ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ, ಈ ಗೆಲುವಿನ ಯಾನದಲ್ಲಿ ಜೊತೆಯಾಗಿ ನಿಂತವರಿಗೆ ಮತ್ತು ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಭಾರತೀಯರಿಗೆ,ವಿಶೇಷವಾಗಿ ನನ್ನಲ್ಲಿ ನಂಬಿಕೆ ಇಟ್ಟುಕೊಂಡಿರುವ ತಾಯಿಗೂ ಅವರು ಧನ್ಯವಾದ ಹೇಳಿದ್ದಾರೆ.

ಇನ್ನು ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ಭಾರತ ರಜತ ಪದಕ ಬಾಚಿಗೊಂಡಿತು. 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮಿರಾಬಾಯ್ ಚಾನು ಪದಕ ಮುಡಿಗೇರಿಸಿಕೊಂಡಿದ್ದಾರೆ.



ಯುಎನ್ ಐ ಕೆಎಸ್ಆರ್ 1544