Monday, Sep 20 2021 | Time 08:35 Hrs(IST)
Sports Share

ದಿವಿಜ್ ಶರಣ್ ಜೋಡಿಗೆ ನಿರಾಸೆ

ಲಂಡನ್, ಜು.4 (ಯುಎನ್ಐ)- ವರ್ಷದ ಮೂರನೇ ಗ್ರ್ಯಾನ್ ಸ್ಲಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ದಿವಿಜ್ ಶರಣ್ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

ಶರಣ್ ಮತ್ತು ಅವರ ಪಾಲುದಾರ ಬ್ರಿಟನ್‌ನ ಸಮಂತಾ ಮುರ್ರೆ ಶರಣ್ 6-3, 6-7, 3-6 ಸೆಟ್‌ಗಳಿಂದ 10 ನೇ ಶ್ರೇಯಾಂಕದ ಜೋಡಿ ದಕ್ಷಿಣ ಆಫ್ರಿಕಾದ ರಾವೆನ್ ಕ್ಲಾಸೆನ್ ಮತ್ತು ಕ್ರೊಯೇಷಿಯಾದ ದಾರಿಜಾ ಜುರಾಕ್ ವಿರುದ್ಧ ನಿರಾಸೆ ಅನುಭವಿಸಿದ್ದಾರೆ.

ಮೊದಲ ಸೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ದಿವಿಜ್ ಶರಣ್ ಜೊಡಿ ಗೆಲುವು ದಾಖಲಿಸಿತು. ಎರಡನೇ ಸೆಟ್ ನಲ್ಲೂ ಜಿದ್ದಾಜಿದ್ದಿನ ಹೋರಾಟ ನೀಡಿದ ಆಟಗಾರರು ಟೈ ಬ್ರೇಕ್ ವರೆಗೂ ಸಾಗಿದ ಪಂದ್ಯದಲ್ಲಿ ಆಘಾತ ಕಂಡಿತು. ಮೂರನೇ ಸೆಟ್ ನಲ್ಲಿ ಭಾರತ ಹಾಗೂ ಬ್ರಿಟನ್ ಜೋಡಿ ಎದುರು ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದು ಸೋಲು ಕಂಡಿತು.

ಯುಎನ್ಐ ವಿಎನ್ಎಲ್ 2254