Friday, Oct 22 2021 | Time 06:19 Hrs(IST)
Special Share

ಸಾಲೇಹ್ ಸಹೋದರನ ಕ್ರೂರವಾಗಿ ಕೊಂದಿರುವ ತಾಲಿಬಾನಿಗಳು

ಸಾಲೇಹ್ ಸಹೋದರನ ಕ್ರೂರವಾಗಿ ಕೊಂದಿರುವ ತಾಲಿಬಾನಿಗಳು
ಕಾಬೂಲ್‌, ಸೆ 10 (ಯುಎನ್‌ ಐ) ಕಳೆದ ತಿಂಗಳು 15 ರಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಪಂಜ್‌ ಶೀರ್‌ ಪ್ರಾಂತ್ಯದಲ್ಲಿ ತೀವ್ರ ಪ್ರತಿರೋಧ ಒಡ್ಡಿರುವ ಹಂಗಾಮಿ ಅಧ್ಯಕ್ಷ ಅಮೃತುಲ್ಲಾ ಸಾಲೇಹ್‌ ವಿರುದ್ದ ಸೇಡು ತೀರಿಸಿಕೊಂಡಿದೆ. ಸಾಲೇಹ್ ಅವರ ಸಹೋದರ ರೊಹುಲ್ಲಾ ಸಾಲೇಹ್‌ ಅವರನ್ನು ದಾರುಣವಾಗಿ ಹತ್ಯೆ ಮಾಡಿದೆ. ಪಂಜ್‌ಶಿರ್‌ನಲ್ಲಿ ರೋಹುಲ್ಲಾ ಸಾಲೇಹ್‌ ನನ್ನು ಸೆರಿಹಿಡಿದು, ಮೊದಲು ಚಾವಟಿ ಹಾಗೂ ವಿದ್ಯುತ್ ತಂತಿಯಿಂದ ತೀವ್ರವಾಗಿ ಥಳಿಸಿದ್ದಾರೆ. ನಂತರ ಕತ್ತು ಸೀಳಿ, ಮೃತ ದೇಹದ ಗುಂಡು ಮಳೆಯನ್ನೇ ಹರಿಸಿದ್ದಾರೆ. ರೋಹುಲ್ಲಾ ಸಾಲೇಹ್‌ ಪಂಜ್‌ ಶೀರ್‌ ನಿಂದ ಕಾಬೂಲ್‌ಗೆ ತೆರಳುತ್ತಿದ್ದಾಗ ತಾಲಿಬಾನಿಗಳು ಸೆರೆಹಿಡಿದಿದ್ದರು ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದೆ ಅಮೃತುಲ್ಲಾ ಸಾಲೇಹ್‌ ವಿಡಿಯೋ ಬಿಡುಗಡೆ ಮಾಡಿದ ನಂತರ ಆತನ ಸಹೋದರ ರೋಹುಲ್ಲಾ ಸಾಲೇಹ್ ನನ್ನು ತಾಲಿಬಾನ್ ಹತ್ಯೆ ಮಾಡಿದೆ. ಪಂಜಿಶೀರ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿಲ್ಲ ಎಂದು ಅಮೃತುಲ್ಲಾ ಸಾಲೇಹ್ ವಿಡಿಯೋದಲ್ಲಿ ಹೇಳಿದ್ದರು. ತನ್ನ ಕೊನೆಯುಸಿರೆಳೆಯುವವರೆಗೂ ಪಂಜಶೀರ್‌ನಲ್ಲಿ ಉಳಿಯುವುದಾಗಿ ಅವರು ಘೋಷಿಸಿದ್ದರು.
ಯುಎನ್‌ ಐ ಕೆವಿಆರ್‌ 1948
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..